ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಪ್ರತಿಜ್ಞಾ ಯೌಗಂಧರಾಯಣ' ಇಂದು

Rashmi Kasaragodu
Updated On : 27 Apr 2014, 1:53 am

ಶಿವಮೊಗ್ಗ:  ಶಿವಮೊಗ್ಗ ಹಬ್ಬ ನಾಟಕೋತ್ಸವದ 7ನೇ ದಿನವಾದ ಭಾನುವಾರ ಸಂಜೆ ಅಭಿನಯ ರಂಗತಂಡವು 'ಪ್ರತಿಜ್ಞಾ ಯೌಗಂಧರಾಯಣ' ನಾಟಕವನ್ನು ಪ್ರೊ.ಹಾಲೇಶಪ್ಪ ಅವರ ನಿರ್ದೇಶನದಲ್ಲಿ ಪ್ರದರ್ಶಿಸಲಿದೆ. ಭಾಸ ಮಹಾಕವಿಯ ಈ ನಾಟಕವನ್ನು ಸಿ.ಪಿ.ಕೃಷ್ಣಕುಮಾರ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಗೀತಾ ಅರುಣ್ ಮತ್ತು ಸಂಗಡಿಗರು, ವಸ್ತ್ರವಿನ್ಯಾಸ ಪುರುಷೋತ್ತಮ ತಲವಾಟ ಅವರದು. ಈ ನಾಟಕದಲ್ಲಿ ಕಾಂತೇಶ್ ಮೂರ್ತಿ ಕೆ.ಎನ್., ಡಾ.ನಾಗಭೂಷಣ ಎಚ್.ಎಸ್., ಪ್ರೊ. ಎಸ್.ಸಿ. ಗೌರಿಶಂಕರ್, ಸುಧೀಂದ್ರರಾವ್ ಎನ್.ಎಸ್., ಹಾಲಸ್ವಾಮಿ ಪಿ.ಎಸ್., ನವೀನ್, ಬ್ಯಾಂಕ್ ಪ್ರಸನ್ನ, ವಿಶ್ವ, ವಿಜಯ ವಾಮನ, ವೀಣಾ ಸ್ವಾಮಿ, ದಿವ್ಯಾ, ಈರಣ್ಣ, ಮನು, ಹೊನ್ನಾಳಿ ಪ್ರದೀಪ್ ಅಭಿನಯಿಸಿದ್ದಾರೆ. ಉದಯನ ಮತ್ತು ವಾಸವದತ್ತೆ ಅವರ ಜೀವನದ ಘಟನೆ ಇದು. ಅಮಾತ್ಯ ಯೌಗಂಧರಾಯಣ ಮಾಡುವ ಎರಡು ಪ್ರತಿಜ್ಞೆಗಳು, ಅವುಗಳನ್ನು ಈಡೇರಿಸಿದ ರೀತಿಯೇ ನಾಟಕದ ಕಥಾವಸ್ತು. ಕಾರ್ಯಕ್ರಮಕ್ಕೆ ರಂಗಾಸಕ್ತರು, ಕಲಾಭಿಮಾನಿಗಳು ಆಗಮಿಸುವಂತೆ ಶಿವಮೊಗ್ಗ ಹಬ್ಬ ಸಂಚಾಲಕ ವೈದ್ಯ ಕೋರಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement