ಬ್ರಾಡ್ಬ್ಯಾಂಡ್ ದರ ಹೆಚ್ಚಳ
ಶಿವಮೊಗ್ಗ: ಭಾರತ ಸಂಚಾರ ನಿಗಮದ ಅನಿಯಮಿತ ಬ್ರಾಡ್ ಬ್ಯಾಂಡ್ ಯೋಜನೆ ಬಿಬಿ ಹೋಂ ರೂರಲ್ ಕಾಂಬೋ ಯುಎಲ್ಡಿ 500 ಮತ್ತು ಬಿಬಿ ಹೋಂ ಕಾಂಬೋ ಯುಎಲ್ಡಿ 950ರ ತಿಂಗಳ ಕನಿಷ್ಠ ದರವು ಅನುಕ್ರಮವಾಗಿ 550 ಮತ್ತು 999 ಆಗಿ ಮೇ 1ರಿಂದ ಜಾರಿಗೆ ಬರುವಂತೆ ಪರಿಷ್ಕೃತಗೊಂಡಿದೆ. ಈಗಾಗಲೇ ಈ ಯೋಜನೆಗಳಲ್ಲಿ ವಾರ್ಷಿಕ ಮುಂಗಡ ಪಾವತಿಸಿರುವ ಬ್ರಾಡ್ ಬ್ಯಾಂಡ್ ಚಂದಾದಾರರಿಗೆ ಪರಿಷ್ಕೃತ ದರ ಪಾವತಿಸಿರುವ ಅವಧಿ ಮುಗಿದೊಡನೆ ಜಾರಿಗೆ ಬರುತ್ತದೆ. ಮಾಹಿತಿಗೆ ಸಂಸ್ಥೆಯ ವೆಬ್ಸೈಟ್ ಢಿಢಿಢಿ.ಛಿಡಟಿಟ.್ಛ್ಟ.್ಝಟಿ ವಾಣಿಜ್ಯ ಅಧಿಕಾರಿ, ಶಿವಮೊಗ್ಗ (261247), ಸಂಬಂಧಿತ ತಾಲೂಕಿನ ಕಾರ್ಯಾಲಯ ಸಂಪರ್ಕಿಸುವಂತೆ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ಬಿದನೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ
ಹೊಸನಗರ: ತಾಲೂಕಿನ ನಗರದ ಚನ್ನಮ್ಮಾಜಿ ಮೈದಾನದಲ್ಲಿ ಮೇ.18 ಭಾನುವಾರ ರಾತ್ರಿ 9 ಗಂಟೆಗೆ ಗೋಳಿಗರಡಿ ಯಕ್ಷಗಾನ ಮೇಳದಿಂದ ಪೌರಾಣಿಕ ಮತ್ತು ಐತಿಹಾಸಿಕ ಬಿದನೂರು ಕಥಾಹಂದರ ಹೊಂದಿರುವ ಬಿದನೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಪತ್ರಕರ್ತ ನಗರ ರಾಘವೇಂದ್ರ ರಚಿತ ಬಿದನೂರು ಕ್ಷೇತ್ರ ಮಹಾತ್ಮೆ ನೂತನ ಪ್ರಸಂಗವಾಗಿದೆ.
ಹೊಲಿಗೆ ತರಬೇತಿ: ಅರ್ಜಿ ಆಹ್ವಾನ
ಶಿವಮೊಗ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ಕೋಟೆ ರಸ್ತೆಯಲಿ ಮಹಿಳಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಹೊಲಿಗೆ ತರಬೇತಿ ಯೋಜನೆಯಡಿ ಸೀಮಿತ 20 ಕಲಿಕಾರ್ಥಿಗಳಿಗೆ ಹೊಲಿಗೆ ತರಬೇತಿ ನೀಡಲು ಉದ್ಧೇಶಿಸಿದ್ದು, ಶಿವಮೊಗ್ಗ ತಾಲೂಕಿನ ಆಸಕ್ತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ತರಬೇತಿಯು 1 ವರ್ಷ ಅವಧಿಯದ್ದಾಗಿದ್ದು, ಆಯ್ಕೆಯಾದ ಕಲಿಕಾರ್ಥಿಗಳಿಗೆ ಮಾಸಿಕವಾಗಿ 300 ತರಬೇತಿ ಭತ್ಯೆ ನೀಡಲಾಗುವುದು. ತರಬೇತಿಯ ನಂತರ ಇಲಾಖೆಯಿಂದ ಪರೀಕ್ಷೆ ನಡೆಸಲಾಗುವುದು. ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಥವಾ ಕೋಟೆ ರಸ್ತೆಯ ಮಹಿಳಾ ಹೊಲಿಗೆ ತರಬೇತಿ ಕೇಂದ್ರದಿಂದಾಗಲಿ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ತಹಸೀಲ್ದಾರರಿಂದ ದೃಢೀಕರಿಸಿದ ಜಾತಿ, ಆದಾಯ ಪ್ರಮಾಣ ಪತ್ರ,7ನೇ ತರಗತಿ ಅಂಕಪಟ್ಟಿ ಹಾಗೂ ಅಗತ್ಯ ದಾಖಲಾತಿಗಳನ್ನು ಮೇ 12ರೊಳಗಾಗಿ ಸಲ್ಲಿಸಬೇಕು. ವಿವರಗಳಿಗಾಗಿ ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಬೈಪಾಸ್ ರಸ್ತೆ, ವಿದ್ಯಾನಗರ, ಶಿವಮೊಗ್ಗ ದೂ.08182-240078 ಸಂಪರ್ಕಿಸಬಹುದು.