ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಣಿಪಾಲ ಆರೋಗ್ಯ ಕಾರ್ಡ್ ಆರಂಭ

Rashmi Kasaragodu
Updated On : 27 Apr 2014, 1:54 am

ಶಿವಮೊಗ್ಗ: 2014ನೇ ಸಾಲಿನ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಗೆ ಸದಸ್ಯತ್ವಕ್ಕೆ ನೋಂದಣಿ ಆರಂಭಗೊಂಡಿದೆ ಎಂದು ಮಣಿಪಾಲ್ ಕಸ್ತೂರ್ಬಾ ಆಸ್ಪತ್ರೆ ಹಿರಿಯ ಪ್ರಬಂಧಕ ಅನಿಲ್ ಪೌಲ್ ಜಾಕಬ್ ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಡನ್ನು ಎರಡು ಅಥವಾ ಮೂರು ಬಾರಿ ಬಳಸುವ ಮೂಲಕ ಶುಲ್ಕಕ್ಕಾಗಿ ತಾವು ಮಾಡಿರುವ ವೆಚ್ಚದ ಲಾಭವನ್ನು ಹಿಂಪಡೆಯಬಹುದಾಗಿರುತ್ತದೆ.  ಸದಸ್ಯತ್ವ ಕಾರ್ಯವು 2014ರ ಜುಲೈ 26ರಂದು ಅಂತ್ಯಗೊಳ್ಳಲಿದೆ. ಒಳರೋಗಿಗಳಿಗೆ ಶುಲ್ಕದಲ್ಲಿ ಶೇ.25 ರಿಯಾಯಿತಿ ದೊರೆಯಲಿದೆ ಮತ್ತು ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ.10ರ ವರೆಗೆ ರಿಯಾಯಿತಿ ಲಭ್ಯವಿದೆ. ಕಾರ್ಡ್ ಸದಸ್ಯರಾಗಲು ಏಕ ವ್ಯಕ್ತಿಗಾದರೆ 250 ಹಾಗೂ ಕುಟುಂಬ ಸದಸ್ಯರಿಗಾದಲ್ಲಿ 500 ನಿಗದಿಪಡಿಸಲಾಗಿದೆ ಎಂದು ಮಣಿಪಾಲ್ ಕಾರ್ಡ್ ಶಿವಮೊಗ್ಗದ ಪ್ರತಿನಿಧಿ ಅ.ನಾ. ವಿಜಯೇಂದ್ರರಾವ್ ತಿಳಿಸಿದರು. ಜಿಲ್ಲೆಯಲ್ಲಿ ಈ ಕಾರ್ಡ್‌ಗೆ ಸದಸ್ಯರಾಗಲು ಅ.ನಾ. ವಿಜಯೇಂದ್ರ ರಾವ್ (9448790127), ಬಾಪೂಜಿ ಎಂ(9916131880), ವಿಪ್ರ ಸೌಹಾರ್ದ (9844251888), ಅನಂತರಾಜು (9902206665) ಸಂಪರ್ಕಿಸಬಹುದೆಂದು ಅನಿಲ್ ಮಾಹಿತಿ ನೀಡಿದರು.


ಪ್ರಶಾಂತ ನಾಯಕ್‌ಗೆ ಪ್ರಶಸ್ತಿ


ಶಿವಮೊಗ್ಗ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ 2014ರ ಮಣಿಪಾಲ ಆರೋಗ್ಯ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ತೀರ್ಥಹಳ್ಳಿಯ ಮಕ್ಕಿಮನೆ ಪ್ರಶಾಂತ್ ನಾಯಕ್ ಅವರಿಗೆ ಡಾ. ಟಿ.ಎಮ್.ಏ. ಪೈ ಆರೋಗ್ಯ ಸೇವಕ ಪುರಸ್ಕಾರವನ್ನು ಮಣಿಪಾಲ ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ಕೆ.ರಾಮನಾರಾಯಣ್ ನೀಡಿದರು. ಈ ಸಂದರ್ಭದಲ್ಲಿ ಮಣಿಪಾಲ ವಿಶ್ವ ವಿದ್ಯಾಲಯದ ಕುಲಪತಿ ಡಾ. ರಾಮದಾಸ್ ಪೈ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮುಖ್ಯಸ್ಥ ಕರ್ನಲ್ ಎಂ. ದಯಾನಂದ, ಡಾ. ಮಧುಸೂಧನ ಉಪಾಧ್ಯಾಯ, ಡಾ. ಪಾರ್ವತಿ ಭಟ್, ಡಾ. ಆನಂದ ವೇಣುಗೋಪಾಲ್, ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.  ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೋಗ್ಯ ಸೇವಕ ಪುರಸ್ಕಾರ ಪ್ರಶಸ್ತಿಗೆ ಭಾಜನರಾದ ಮಕ್ಕಿಮನೆ ಪ್ರಶಾಂತ್ ನಾಯಕ್ ಅವರಿಗೆ ಶಿವಮೊಗ್ಗ ವಿಭಾಗದ ಮಣಿಪಾಲ ಆರೋಗ್ಯ ಕಾರ್ಡ್ ಸೂಪರ್ ಏಜೆಂಟ್ ಅ.ನಾ. ವಿಜಯೇಂದ್ರ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement