ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಶಿವಮೊಗ್ಗ: ಸ್ವದೇಶಿ ವಿಜ್ಞಾನ ಆಂದೋಲನ, ಯುವ ವಿದ್ಯಾರ್ಥಿ ವೇದಿಕೆಯು ಏಪ್ರಿಲ್ 28ರಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಸಿಎನ್‌ಆರ್.ರಾವ್ ಸಭಾಂಗಣದಲ್ಲಿ 'ವರಾಹಮಿಹಿರಂ' ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ಕುವೆಂಪು ವಿಶ್ವ ವಿದ್ಯಾಲಯದ ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ವೆಂಕಟೇಶ್ವರು ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಿದ್ದು, ಸ್ವದೇಶಿ ವಿಜ್ಞಾನ ಆಂದೋಲನದ ಸ್ಥಾಪಕ ಪ್ರೊ.ಕೆ.ಐ.ವಾಸು, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಾಗೇಶ್ವರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಚ್.ಎಂ.ಬಾಲಚಂದ್ರಮೂರ್ತಿ, ಪ್ರಾಧ್ಯಾಪಕ ಪ್ರೊ. ಜೋಗದ ಎಂ.ಎಸ್., ರಮೇಶ್ ಎಚ್. ಉಪಸ್ಥಿತರಿರುವರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶಕುಂತಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಮಲ್ಲಿಕಾ ಘಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಚ.ಅನಿತ್ ಕುಮಾರ್ ಉಪಸ್ಥಿತರಿರುವರು.
ಹೃದಯ ತಪಾಸಣೆ ಮೇ 2ರಂದು
ಶಿವಮೊಗ್ಗ: ಶ್ರೀ ಮುರುಘ ರಾಜೇಂದ್ರ ಮಹಾಸಂಸ್ಥಾನ ಟ್ರಸ್ಟ್ ಮೇ 2ರಂದು ಬಸವೇಶ್ವರ ಜಯಂತಿ, ಉಚಿತ ಹೃದಯ ತಪಾಸಣೆ ಶಿಬಿರಿ, ಪುಸ್ತಕ ಬಿಡುಗಡೆ ಹಾಗೂ 454ನೇ ಮಾಸಿಕ ಶಿವಾನುಭವಗೋಷ್ಠಿಯನ್ನು ಆನಂದಪುರಂನ ಮುರುಘಾ ಮಠದಲ್ಲಿ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 10.30ಕ್ಕೆ ಶ್ರೀಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಓಂಕಾರಪ್ಪ ಉಪನ್ಯಾಸ ನೀಡಲಿದ್ದಾರೆ. ಸತ್ಯನಾರಾಯಣ ರಾವ್ ವಿರಚಿತ ಸಾಗರ ಸುತ್ತ, ಡಾ. ನಾಗನಾಥ ಅವರ ಹಂಚಿಕೊಳ್ಳೋಣ ಬಾ ಗೆಳತಿ ನೆನಪುಗಳ ಪುಸ್ತಕ ಬಿಡುಗಡೆ ಇದೇ ಸಂದರ್ಭದಲ್ಲಿ ನಡೆಯಲಿದೆ. ಪುಸ್ತಕ ಕುರಿತು ಡಾ.ವೆಂಕಟೇಶ ಜೋಯ್ಸ್ ಮಾತನಾಡಲಿದ್ದು, ಗಾರ್ಗಿ ಕಾರೆಹಕ್ಲು, ನಾಗಭೂಷಣ ಹೆಗಡೆ ವಚನ ನಿರ್ವಚನ ನಡೆಸಿಕೊಡಲಿದ್ದಾರೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆ ವರೆಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆ ಮತ್ತು ಹಾರ್ಟ್ ಇನ್‌ನ್ಸ್ಟಿಟ್ಯೂಟಟ್ಲಿಮಿಟೆಡ್, ಯುವ ರೆಡ್ಕ್ರಾಸ್ಸ್‌ಹಯೋಗದಲ್ಲಿ ಹೃದಯ ರೋಗ ತಪಾಸಣಾ ಶಿಬಿರ ನಡೆಯಲಿದೆ ಎಂದು ಮಠ ತಿಳಿಸಿದೆ. ಸಂಪರ್ಕ ಸಂಖ್ಯೆ- 9980891568.