ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಠಲ ರುಖುಮಾಯಿ ದಿಂಡಿ ಉತ್ಸವ ಸಮಾರೋಪ

Rashmi Kasaragodu
Updated On : 28 Apr 2014, 10:59 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಏ.27 ಶಿರಾಳಕೊಪ್ಪ ಪಟ್ಟಣದಲ್ಲಿ ವಿಠಲ ರುಖುಮಾಯಿ ದೇವರ ದಿಂಡಿ ಉತ್ಸವ ಮತ್ತು ನಾಮದೇವರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪಟ್ಟಣದ ನಾಮದೇವ ಸಿಂಪಿ ಸಮಾಜದ ಆಶ್ರಯದಲ್ಲಿ 4 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಮೊದಲ ದಿನ ಕಲಾ ಹೋಮ, ನವಗ್ರಹ ಶಾಂತಿ ನಾರಾಯಣ ಸೂಕ್ತ ಹೋಮ ನಡೆಯಿತು. ನಾಮದೇವಮೂರ್ತಿ ಮೆರವಣಿಗೆ ನಡೆಸಲಾಯಿತು.
ಸಂತರಿಂದ ಭಜನೆ: ನಂತರ ಪೋತಿ ಸ್ಥಾಪನೆ ನಂತರ ಸಂಜೆ ಕೀರ್ತನೆ ನಡೆಸಲಾಯಿತು. ಪ್ರತಿದಿನ ವಿಠಲ ರುಖುಮಾಯಿ ದೇವರಿಗೆ ಕಾಕಡಾರತಿ ಅಭಿಷೇಕ ನಾಮದೇವ ಜಪ ಹಾಗೂ ಪ್ರವಚನ ನಡೆದವು. ಸ್ಥಳೀಯ ಮತ್ತು ಪರಸ್ಥಳದಿಂದ ಆಗಮಿಸಿದ ಸಾಧು ಸಂತರಿಂದ ಪಾಳಿ ಭಜನೆ ಕಾರ್ಯಕ್ರಮ ನಡೆಯಿತು.
ಕೊನೆ ದಿನವಾದ ದಿನವಾದ ಭಾನುವಾರ ವಿಠಲ ರುಖುಮಾಯಿ ದೇವರ ರಾಜಬೀದಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಸಿಂಪಿ ಸಮಾಜದ ಪ್ರತಿ ಮನೆಯ ಬಾಗಿಲಿಗೆ ದೇವರ ಉತ್ಸವ ಆಗಮಿಸಿದಾಗ ದೇವರಿಗೆ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ನಂತರ ಉತ್ಸವ ದೇವಸ್ಥಾನಕ್ಕೆ ಆಗಮಿಸಿದಾಗ ಸಂತವಾಣಿ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನಡೆಸಲಾಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು. ಪಟ್ಟಣದ ಸಿಂಪಿ ಸಮಾಜ ಭಾಂದವರು, ಸಾಗರ, ಶಿಕಾರಿಪುರ, ಆನವಟ್ಟಿ, ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ, ಹಿರೇಕೆರೂರ ಹಾಗೂ ಬೆಳಗಾಂ ಜಿಲ್ಲೆಯ ಕಿತ್ತೂರಿನಿಂದ ಭಜನಾ ಮಂಡಳಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement