ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಂಕ್ರಿಟ್ ರಸ್ತೆ ಕಳಪೆ: ಲೋಕಾ ತನಿಖೆಗೆ ಒತ್ತಾಯ

Rashmi Kasaragodu
Updated On : 29 Apr 2014, 11:07 am

ಡಿಸಿಗೆ ನವ ಚೈತನ್ಯ ಕರ್ನಾಟಕ ಸೇನೆ ಮನವಿ, ಈಶ್ವರ ದೇಗುಲ ಪಕ್ಕದ ರಸ್ತೆ ಸಂಪೂರ್ಣ ಕಳಪೆ


ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಯು ಕಳಪೆಯಾಗಿದ್ದು, ಲೋಕಾಯುಕ್ತ ತನಿಖೆ ನಡೆಸುವಂತೆ ನವ ಚೈತನ್ಯ ಕರ್ನಾಟಕ ಸೇನೆ ಜಿಲ್ಲಾಧಿಕಾರಿ ಅವರನ್ನು ಒತ್ತಾಯಿಸಿದೆ.
ಸೋಮವಾರ ಪ್ರತಿಭಟನೆ ನಡೆಸಿದ ಸಂಘಟನೆ ಸದಸ್ಯರು, ಶಿವಮೊಗ್ಗ ನಗರದ ವಿವಿಧ ವಾರ್ಡ್‌ಗಳಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸಂಪೂರ್ಣ ಕಳಪೆಯಿಂದ ಕೂಡಿದೆ. ಪಾಲಿಕೆ ಎಂಜಿನಿಯರ್‌ಗಳ ಬೇಜವಾಬ್ದಾರಿಯಿಂದ ನಾಗರಿಕರ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.
ಅಸಮಧಾನ: ವಾರ್ಡ್ 16ರ ಈಶ್ವರ ದೇವಸ್ಥಾನದ ಅಕ್ಕಪಕ್ಕದಲ್ಲಿ ನಡೆಯುತ್ತಿರುವ ಕಾಂಕ್ರಿಟ್ ರಸ್ತೆಯಂತೂ ಸಂಪೂರ್ಣ ಕಳಪೆಯಾಗಿದ್ದು, ಉದುರು ಮಣ್ಣಿನ ಮೇಲೆ 40 ಎಂಎಂ ಬೆಡ್ ಕಾಂಕ್ರಿಟ್ ಹಾಕಿ ಅದು ಹೊಂದಿಕೊಳ್ಳುವ ಮೊದಲೇ ಅದರ ಮೇಲೆ 20 ಎಂಎಂ ಜಲ್ಲಿ ಕಾಂಕ್ರಿಟ್ ಹಾಕಿದ್ದಾರೆ. ಅದೇ ರೀತಿ ಎಲ್ಲಾ ವಾರ್ಡ್‌ನ ಕಾಂಗ್ರೆಸ್ ರಸ್ತೆ ಕಾಮಗಾರಿ ನಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಸ್ತೆ ಕಾಮಗಾರಿ ಕೈಗೊಂಡ ಗುತ್ತಿಗೆ ಕಾರ್ಮಿಕರು ತಮಗಿಷ್ಟ ಬಂದಂತೆ ರಸ್ತೆ ನಿರ್ಮಿಸುತ್ತಿದ್ದು, ಮೇಲ್ವಿಚಾರಣೆ ಮಾಡಬೇಕಾದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ತಲೆ ಹಾಕುತ್ತಿಲ್ಲ, ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.
ಸೂಕ್ತ ಪ್ರಮಾಣದ ಸಿಮೆಂಟ್ ಬಳಸದೇ ಹಾಗೂ ನಿಬಂಧಗಳಲ್ಲಿ ಸೂಚಿಸಿದಂತೆ ಅನುಪಾತದಲ್ಲಿ ಕಾಂಕ್ರಿಟ್ ಹಾಕುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಕಾಂಕ್ರಿಟ್ ರಸ್ತೆಗಳನ್ನು ಗುಣಮಟ್ಟ ಪರೀಕ್ಷಕರಿಂದ ಪರಿಶೀಲಿಸಿ ನಂತರ ಗುತ್ತಿಗೆದಾರರ ಬಿಲ್ ಸಂದಾಯ ಮಾಡಬೇಕು. ಅಲ್ಲಿಯವರೆಗೆ ಯಾವುದೇ ಒತ್ತಡ, ಆಮಿಷಗಳಿಗೆ ಬಲಿಯಾಗಿ ಬಿಲ್ ಪಾವತಿಸದಂತೆ ಮಹಾನಗರ ಪಾಲಿಕೆಗೆ ಆದೇಶ ನೀಡುವಂತೆ ಒತ್ತಾಯಿಸಿದರು.
ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಸೇನೆಯ ಜಿಲ್ಲಾಧ್ಯಕ್ಷ ಪ್ರತಾಪ ಗೌಡ ಆಗ್ರಹಿಸಿದ್ದಾರೆ. ಪ್ರತಿಭಟನೆ ವೇಳೆಯಲ್ಲಿ ಎಚ್.ಕೆ. ವಿಜಯಮೆನನ್, ಶ್ರೀನಿವಾಸ ಗೌಂಡರ್, ಎಲ್. ದೇವರಾಜ, ಮಂಜಪ್ಪ, ನಟೇಶ್ ಸೋಗಾನೆ, ವೀರೇಶ್ ಚಿತ್ತರಗಿ, ಕೆ.ಜಿ. ಚಂದ್ರನ್, ಗಿರಿಜಮ್ಮ, ಉಷಾ ನಾಯಕ್, ನಜ್ಮಾ ದಾದಾಪೀರ್, ಸರಸ್ವತಿ ಚಿನ್ನಪ್ಪ, ನೂರು ಯೂಸುಫ್, ರಕ್ಷಿತ್, ರಾಜು, ಧರ್ಮರಾಜು ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement