ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೆಸ್ ಪಂದ್ಯಾವಳಿಗೆ ಚಾಲನೆ

Rashmi Kasaragodu
Updated On : 29 Apr 2014, 11:06 am

ಶಿವಮೊಗ್ಗ: ನಳಂದ ಚೆಸ್ ಅಕಾಡೆಮಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ನಳಂದ ಕಪ್ ಓಪನ್ ಫಿಡೆ ಚೆಸ್ ರೇಟಿಂಗ್ ಪಂದ್ಯಾವಳಿಗೆ ಸೋಮವಾರ ವಿಧ್ಯುಕ್ತ ಚಾಲನೆ ದೊರೆಯಿತು.
ಸ್ಥಳೀಯ ಪ್ರತಿಭೆಗಳೂ ಸೇರಿದಂತೆ ವಿವಿದ ಜಿಲ್ಲೆ, ಹೊರ ರಾಜ್ಯದವರು ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಚೆಸ್ ಆಡುವುದರಿಂದ ಮಾನಸಿಕ ಸಾಮರ್ಥ್ಯ ಹೆಚ್ಚಳ ಆಗುತ್ತದೆ. ಪ್ರತಿಯೊಬ್ಬರಿಗೂ ದೈಹಿಕ ಸಾಮರ್ಥ್ಯ ಎಷ್ಟು ಮುಖ್ಯವೋ ಮಾನಸಿಕ ಸಾಮರ್ಥ್ಯ ಕೂಡ ಅಷ್ಟೇ ಮುಖ್ಯ ಎಂದು ಅಭಿಪ್ರಾಯಪಟ್ಟರು.
ಸೂಕ್ತ ರೀತಿಯಲ್ಲಿ ಚೆಸ್ ತರಬೇತಿ ಪಡೆದು, ಪಂದ್ಯಾವಳಿಯಲ್ಲಿ ಸಾಧನೆ ಮಾಡುವ ಮೂಲಕ ವಿಶ್ವನಾಥನ್ ಆನಂದ್ ಮಾದರಿಯಲ್ಲಿ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುವಂತೆ ಕ್ರೀಡಾಪಟುಗಳಿಗೆ ಕರೆ ನೀಡಿದರು.
ನಳಂದ ಚೆಸ್ ಅಕಾಡೆಮಿಯ ಶ್ರೀಕೃಷ್ಣ ಉಡುಪ ಮಾತನಾಡಿ, ಅಕಾಡೆಮಿಯು ಕಳೆದ 14 ವರ್ಷಗಳಿಂದ ಮಕ್ಕಳಿಗೆ ಚೆಸ್ ತರಬೇತಿ ನೀಡುತ್ತಿದೆ. ಇದೇ ಪ್ರಥಮ ಬಾರಿಗೆ ದೊಡ್ಡ ಪಂದ್ಯಾವಳಿ ಏರ್ಪಡಿಸಿದೆ ಎಂದರು.
ನಗರದ ಚೆಸ್ ಆಟಗಾರರಿಗೆ ಒಳಾಂಗಣ ಕ್ರೀಡಾಂಗಣದಲ್ಲಿ ನಿತ್ಯ ಚೆಸ್ ಆಡಲು ವ್ಯವಸ್ಥೆ ಕಲ್ಪಿಸುವಂತೆ ಇದೇ ಸಂದರ್ಭ ಜಿಲ್ಲಾಧಿಕಾರಿ ಅವರನ್ನು ಕೋರಿದರು.
ಸಮಾರಂಭದಲ್ಲಿ ರೌಂಡ್ ಟೇಬಲ್ ಸಂಸ್ಥೆಯ ರೋಹನ್, ಎನ್.ರಾಜಶೇಖರ್ ಉಪಸ್ಥಿತರಿದ್ದರು. ಶಿವಯೋಗಿ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement