ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಂಬಿಟ್ಟಿಗೆ ಗಣಿ ಪರವಾನಗಿ: ಸ್ಥಳ ಸರ್ವೆ

Rashmi Kasaragodu
Updated On : 29 Apr 2014, 11:16 am

ಅರಣ್ಯ, ಕಂದಾಯ ಇಲಾಖೆ ಜಂಟಿಯಾಗಿ ಸ್ಥಳದ ಸಮೀಕ್ಷೆ


ಸಾಗರ: ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಂಕಟವಳ್ಳಿ ಗ್ರಾಮದ ಸರ್ವೆ ನಂ.14ರ ಒಂದು ಎಕರೆಯಲ್ಲಿ ನೀಡಲಾಗಿರುವ ಜಂಬಿಟ್ಟಿಗೆ ಗಣಿಗಾರಿಕೆ ಪರವಾನಗಿ ವಿಚಾರದ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸೋಮವಾರ ಭೂ ಗರ್ಭ ಶಾಸ್ತ್ರಜ್ಞ ವಿಶ್ವನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ಸ್ಥಳದ ಸಮೀಕ್ಷೆಯನ್ನು ನಡೆಸಿತು.
ಭೂ ಗರ್ಭ ಶಾಸ್ತ್ರಜ್ಞ ವಿಶ್ವನಾಥ್ ಮಾತನಾಡಿ, 2010ರ ಫೆಬ್ರವರಿ 26ರಂದು ಈ ಸ್ಥಳದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆಗಳು ಹಸಿರು ನಿಶಾನೆ ತೋರಿಸಿದ ನಂತರವೇ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಇದಕ್ಕೆ ಅನುಮತಿ ನೀಡಿದೆ. ಮೊದಲು ಅನುಮತಿ ನೀಡುವಾಗ ಅರಣ್ಯ ಇಲಾಖೆ ಬಫರ್ ಝೋನ್‌ನಿಂದ 350 ಮೀ. ದೂರದಲ್ಲಿದೆ ಎಂಬ ವರದಿಯಿತ್ತು. ಈಗ ಅಳತೆಯಿಂದ 71 ಮೀ. ಮಾತ್ರ ದೂರದಲ್ಲಿದೆ ಎಂಬುದು ಕಂಡುಬಂದಿದೆ. ಗಡಿ ಗುರುತಿಸಲು ಹಾಕಲಾದ ಯಾವುದೇ ಕಲ್ಲುಗಳು ಸ್ಥಾನಪಲ್ಲಟ ಆಗಿದ್ದು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.  
ನೀತಿ ರೂಪಿಸುವ ಸಂಭವ: ಸಾಗರದಲ್ಲಿ ಒಟ್ಟು 41 ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದ್ದು, ಅದರಲ್ಲಿ 9 ಜಲ್ಲಿಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತವು. ರಾಜ್ಯ ಸರ್ಕಾರ ಈ ವರ್ಷದ ಅಂತ್ಯದಲ್ಲಿ ಪರಿಸರ ಸಂರಕ್ಷಣೆ ಕುರಿತಾಗಿ ಕಸ್ತೂರಿ ರಂಗನ್ ಅಥವಾ ಇತರ ವರದಿಗಳನ್ನು ಆಧರಿಸಿ ನೀತಿ ರೂಪಿಸುವ ಸಂಭವವಿದೆ. ಆ ನಂತರದಲ್ಲಿ ಗಣಿಗಾರಿಕೆಯಲ್ಲದೆ ಎಲ್ಲ ಅಭಿವೃದ್ಧಿ ಕಾಮಗಾರಿಗಳೂ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟರು.
ಸಮೀಕ್ಷಾ ತಂಡದಲ್ಲಿ ಕಂದಾಯ ಇಲಾಖೆಯಿಂದ ಆವಿನಹಳ್ಳಿ ಹೋಬಳಿ ಗ್ರಾಮ ಲೆಕ್ಕಿಗ ಕೃಷ್ಣಮೂರ್ತಿ, ಅರಣ್ಯ ಇಲಾಖೆಯ ಆವಿನಹಳ್ಳಿ ವಿಭಾಗದ ಅರಣ್ಯ ಅಧಿಕಾರಿ ನರೇಶ್, ಅರಣ್ಯ ಪಾಲಕ ಮೆಲಾಲಿ ಸಾಬ್‌ದುಂಡ್ಸಿ, ರಾಮಯ್ಯ ಅಂಬಾರಗೋಡ್ಲು ಇದ್ದರು. ಗ್ರಾಪಂ ಮಾಜಿ ಅಧ್ಯಕ್ಷ ರಾಮಚಂದ್ರ ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement