ದಲಿತರ ಏಳ್ಗೆಯಲ್ಲಿ ಅಂಬೇಡ್ಕರ್ ಬೆಳಕು: ಪ್ರೊ.ಸಿದ್ದಲಿಂಗಯ್ಯ
ಕ.ಪ್ರ.ವಾರ್ತೆ, ಶಂಕರಘಟ್ಟ, ಏ.28
ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಹಾಗೂ ಬೌದ್ಧ ಅಧ್ಯಯನ ಕೇಂದ್ರ, ಪರಿಶಿಷ್ಟ ಜಾತಿ ಪಂಗಡಗಳ ಅಭಿವೃದ್ಧಿ ಘಟಕವು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕವಿ ಪ್ರೊ. ಸಿದ್ದಲಿಂಗಯ್ಯ ಮಾತನಾಡಿ, ಭಾರತದ ದಲಿತರು ಏಳಿಗೆ ಕಾಣುವಲ್ಲಿ ಅಂಬೇಡ್ಕರ್ ಪಾತ್ರ ದೊಡ್ಡದು ಎಂದರು.
ಅಂಬೇಡ್ಕರ್ ಅವರ ಬಗೆಗಿನ ವಿವಿಧ ಮಹನೀಯರ ಅಭಿಪ್ರಾಯ ಮತ್ತು ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾರ್ಗದರ್ಶನ ಎಂದು ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ ಕುಲಸಚಿವರಾದ ಪ್ರೊ. ಮಲ್ಲಿಕಾ ಘಂಟಿ ಮಾತನಾಡಿ, ಅಂಬೇಡ್ಕರ್ ಅವರನ್ನು ಅವತಾರ ಪುರುಷರಾಗಿಸಿದ ಪರಿ ಹಾಗೂ ಪಂಕ್ತಿಬೇಧ ಕುರಿತು ಮಾತನಾಡಿದರು.
ಕುಲಪತಿ ಎಸ್.ಎ.ಬಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾಂಕ ಸಂಗಡಿಗರು ಬೌದ್ಧಗೀತೆ, ನಾಡಗೀತೆ ಹಾಡಿದರು. ಶಿವಮೊಗ್ಗದ ರಂಗಬೆಳಕು ತಂಡದವರು ರಂಗಗೀತೆ ಪ್ರಸ್ತುತಪಡಿಸಿದರು. ಸಮಾಜ ಕಾರ್ಯ ವಿಭಾಗದ ಪ್ರೊ. ರವೀಂದ್ರ ಸ್ವಾಗತಿಸಿದರು.