ಜಮುರಾ ನಾಟಕೋತ್ಸವ ಇಂದಿನಿಂದ
ಶಿವಮೊಗ್ಗ: ಚಿತ್ರದುರ್ಗದ ರೆಪರ್ಟರಿ ಜಮುರಾ ಕಲಾವಿದರು ಅಭಿನಯಿಸಲಿರುವ, ಮಹದೇವ ಹಡಪದ ಅವರು ನಿರ್ದೇಶಿಸಿರುವ ಎರಡು ನಾಟಕಗಳ 'ಜಮುರಾ ನಾಟಕೋತ್ಸವ'ವು ನಗರದ ಬಸವ ಕೇಂದ್ರದಲ್ಲಿ ಏ.30ರಿಂದ 2 ದಿನ ನಡೆಯಲಿದೆ.
ಬಸವಕೇಂದ್ರ, ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ, ಸುವರ್ಣೇಶ್ವರ ಕನ್ನಡ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ನಾಟಕೋತ್ಸವವು ನಗರದ ನಡೆಯಲಿದೆ ಎಂದು ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಉತ್ಸವದ ಮೊದಲ ದಿನ ಸಂಜೆ 6.30ಕ್ಕೆ ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಅವರು ರಚಿಸಿರುವ 'ತಲ್ಲಣಿಸದಿರು ಕಂಡ್ಯಾ ತಾಳು ಮನವೇ' ನಾಟಕ ಪ್ರದರ್ಶನವಾಗಲಿದ್ದು, ಕುವೆಂಪು ವಿವಿ ಕುಲಸಚಿವರಾದ ಡಾ. ಮಲ್ಲಿಕಾ ಘಂಟಿ ಉದ್ಘಾಟಿಸುವರು. ಡಾ. ಶಿವಮೂರ್ತಿ ಮುರುಘರಾಜೇಂದ್ರ ಶರಣರು ಸಾನ್ನಿಧ್ಯ ವಹಿಸುವರು.
ಮಡಿವಾಳೇಶ್ವರ ಮಠದ ಶ್ರೀ ಬಸವ ಸಿದ್ದಲಿಂಗ ಸ್ವಾಮೀಜಿ, ಬಸವಕೇಂದ್ರದ ಚರಮೂರ್ತಿಗಳಾದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಕುವೆಂಪು ವಿವಿ ಕುಲಪತಿಗಳ ವಿಶೇಷ ಕರ್ತವ್ಯಾಧಿಕಾರಿ ಡಾ. ಪ್ರಶಾಂತ ನಾಯಕ್, ಡಾ. ಜಿ. ಮಲ್ಲಿಕಾರ್ಜುನಪ್ಪ, ಜಿಲ್ಲಾ ಸಂಗೊಳ್ಳಿ ರಾಯಣ್ಣ ಕುರುಬರ ವೇದಿಕೆ ಅಧ್ಯಕ್ಷ ರಾಮಕೃಷ್ಣ ಮೂಡ್ಲಿ ಉಪಸ್ಥಿತರಿರುವರು. ಬಸವಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪ ಅಧ್ಯಕ್ಷತೆ ವಹಿಸುವರು.
ಮೇ 1 ರಂದು ಡಾ. ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಶರಣರು ರಚಿಸಿರುವ 'ಮೌಢ್ಯ ಬಿಡಿ ನಂಬಿಕೆ ಇಡಿ' ನಾಟಕ ಪ್ರದರ್ಶನವಿದ್ದು, ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉದ್ಘಾಟಿಸುವರು. ನಗರಸಭಾ ಸದಸ್ಯ ನಾಗರಾಜ ಕಂಕಾರಿ ಅಧ್ಯಕ್ಷತೆ ವಹಿಸುವರು.
ಮೇ 2ರಂದು ಶುಕ್ರವಾರ ಬೆಳಗ್ಗೆ ಬಸವ ಜಯಂತಿ ಪ್ರಯುಕ್ತ ಸಾಮೂಹಿಕ ಭಜನೆ, ಅಂಬಲಿ ದಾಸೋಹ ಹಮ್ಮಿಕೊಳಅಳಲಾಗಿದೆ ಸಂಜೆ 6.30ಕ್ಕೆ ನಾಟಶ್ರೀ ಕಲಾತಂಡದವರಿಂದ ವಿದ್ವಾನ್ ದತ್ತಮೂರ್ತಿ ಭಟ್ ಸಾರಥ್ಯದಲ್ಲಿ ಜಗಜ್ಯೋತಿ ಬಸವೇಶ್ವರ ಚರಿತ್ರೆ ಯಕ್ಷಗಾನ ಪ್ರದರ್ಶನ ನಡೆಯುವುದು ಎಂದರು.