ರಾಜಿನಾಮೆ ನೀಡಲು ದೇಗುಲ ಸಮಿತಿ ಸದಸ್ಯರ ತೀರ್ಮಾನ
ಶಿವಮೊಗ್ಗ: ಶ್ರೀಯಾಗ ಕ್ಷತ್ರಿಯ ಸಾಧುಶೆಟ್ಟಿ ಸಂಘ, ಶ್ರೀದೊಡ್ಡಮ್ಮ ಜಲದುರ್ಗಮ್ಮ ದೇವಾಲಯ ಸಮಿತಿಗೆ ರಾಜಿನಾಮೆ ನೀಡಲು ಕಾರ್ಯಕಾರಿ ಸಮಿತಿ 11 ಸದಸ್ಯರು ತೀರ್ಮಾನಿಸಿದ್ದಾರೆ.
ಸಮಿತಿ ಸರ್ವ ಸದಸ್ಯರ ಸಭೆಯನ್ನು ಕಾನೂನುಬಾಹಿರವಾಗಿ 3 ದಿನ ಮುಂಚಿತವಾಗಿ ನಡೆಸಲು ಕರಪತ್ರವನ್ನು ಕೆಲವೇ ಜನರಿಗೆ ಹಂಚಲಾಗಿದೆ. ಮುಂದೂಡಿದ ಸರ್ವ ಸದಸ್ಯರ ಸಭೆಯಲ್ಲಿ ಕಾರ್ಯಸೂಚಿ ಕಾರ್ಯಕ್ರಮದಂತೆ ನೂತನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ ಅವರಿಂದ ಮೇ ತಿಂಗಳಲ್ಲಿ ಶ್ರೀದೊಡ್ಡಮ್ಮ ಜಲದುರ್ಗಮ್ಮ ದೇವಿಯ ಕೆಂಡದಾರ್ಚನೆ ಮಾಡಲು ಅನುವು ಮಾಡಿಕೊಡಬೇಕೆಂದು ಚರ್ಚೆ ಆರಂಭ ಆಗುತ್ತಿದ್ದಂತೆ ಅಧ್ಯಕ್ಷ ಎಸ್.ಆರ್. ಸೂರಪ್ಪ ಮತ್ತು ಕಾರ್ಯದರ್ಶಿ ಎಸ್.ವೈ. ರಮೇಶ್ ಅಧಿಕಾರ ಬಿಟ್ಟುಕೊಡಲು ಆಸಕ್ತಿ ತೋರದೆ ಕಾನೂನುಬಾಹಿರವಾಗಿ ಸಭೆ ಬರ್ಕಾಸ್ತ್ ಮಾಡಿ ಸಭೆಯಿಂದ ನಿರ್ಗಮಿಸಿದರು ಎಂದು ಆರೋಪಿಸಿದ್ದಾರೆ. ಈ ಕ್ರಮ ಖಂಡಿಸಿ, ಸದಸ್ಯರು ಕಾನೂನು ರೀತಿ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು. ಸದಸ್ಯರಾದ ಕಿಬ್ಬನಳ್ಳಿ ನರಸಿಂಹ, ವಿ.ರಾಜು, ಸೋಮಸುಂದರ, ಹೊನ್ನಪ್ಪ, ಕೃಷ್ಣಪ್ಪ ಮತ್ತಿತರರು ರಾಜಿನಾಮೆ ನೀಡುವುದಾಗಿ ಹೇಳಿದ್ದಾರೆ.