ಅಪರಿಚಿತ ಶವ ಪತ್ತೆ
ಶಿವಮೊಗ್ಗ: ನಗರದ ವಿವಿಧೆಡೆ ಅಪರಿಚಿತ ವ್ಯಕ್ತಿಯ ಶವಗಳು ಪತ್ತೆಯಾಗಿದ್ದು, ವಾರಸುದಾರರು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ.
ನಗರದ ಮೆಗ್ಗಾನ್ ಆಸ್ಪತ್ರೆಯ ಶರಾವತಿ ಬಿಲ್ಡಿಂಗ್ ಹತ್ತಿರ ಏ. 7ರಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 40 ವರ್ಷ ವಯಸ್ಸಾಗಿದ್ದು, ಈ ವ್ಯಕ್ತಿಯು ಉದ್ದನೆಯ ಮುಖ, ಎಣ್ಣೆಗೆಂಪು ಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಬಿಳಿ-ಕಪ್ಪು ಕೂದಲು ಇರುತ್ತೆ. ಮತ್ತೊಂದು ಪ್ರಕರಣದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿಯೊಬ್ಬ ಚಿಕಿತ್ಸೆ ಗುಣಮುಖವಾಗದೇ ಮೃತಪಟ್ಟಿರುತ್ತಾನೆ. ಮೃತನು ಸುಮಾರು 45 ವರ್ಷ, ಉದ್ದನೆಯ ಮುಖ, ಎಣ್ಣೆಗೆಂಪು ಬಣ್ಣ, ತೆಳುವಾದ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಬಿಳಿ-ಕಪ್ಪು ಕೂದಲು ಇರುತ್ತೆ. ಗಡ್ಡ ಬಿಟ್ಟಿರುತ್ತಾನೆ. ಕಂದು ಬಣ್ಣದ ಬನಿಯನ್ ಹಾಗೂ ನೀಲಿ ಬಣ್ಣದ ಲುಂಗಿ ಧರಿಸಿರುತ್ತಾನೆ. ಈತನ ಹೆಸರು, ವಿಳಾಸ ಮತ್ತು ವಾರಸುದಾರರು ಪತ್ತೆಯಾಗಿರುವುದಿಲ್ಲ. ಈ ಪ್ರಕರಣಗಳಲ್ಲಿ ಮೃತಞ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.