ಕಸಾಪಕ್ಕೆ ನೂತನ ಸಮಿತಿ
ಶಿವಮೊಗ್ಗ: ಸೊರಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿಯನ್ನು ಪುನರ್ ರಚಿಸಲಾಗಿದ್ದು, ಇದುವರೆಗೆ ಕೋಶಾಧ್ಯಕ್ಷರಾಗಿದ್ದ ಶಿವಾನಂದ ಪಾಣಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲಾ ಸಮಿತಿಯ ತೀರ್ಮಾನದಂತೆ ನಿಯೋಗ ಕಳಿಸಿ ಸೊರಬಕ್ಕೆ ಹೋಗಿ ಸಭೆ ನಡೆಸಿ ಸಭೆಯ ಅಭಿಪ್ರಾಯವನ್ನು ಜಿಲ್ಲಾ ಸಮಿತಿಗೆ ವರದಿ ಮಾಡಿತ್ತು. ವರದಿ ಆಧರಿಸಿ ಸಮಿತಿ ಪುನರ್ ರಚಿಸಲಾಗಿದೆ.
ಕಾರ್ಯದರ್ಶಿಗಳಾಗಿ ರಾಘವೇಂದ್ರ ಬಾಪಟ್ ಮತ್ತು ಇಂದಿರಾ ಆರ್.ಎಸ್., ಕೋಶಾಧ್ಯಕ್ಷರನ್ನಾಗಿ ಸೈಯ್ಯದ್ ಅನ್ಸರ್ ಎಂ., ನಿಕಟಪೂರ್ವ ಅಧ್ಯಕ್ಷ ಮಧುರಾಯ ಜಿ. ಶೇಟ್, ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಎಸ್.ಆರ್. ಕುಮಾರಸ್ವಾಮಿ, ಮಂಜಪ್ಪ ಡಿ., ರೇವಣಪ್ಪ ಬಿದರೆಗೆರೆ, ಹರೀಶ್, ಗೌರಮ್ಮ ಭಂಡಾರಿ, ಅಶೋಕ ಟೇಮ್ಕರ್, ಚಂದ್ರಕಾಂತ್, ಚಂದ್ರಪ್ಪ ಅತ್ತಿಕಟ್ಟೆ, ರಾಜುದಾಮ್ಲೆ, ನಾಗರಾಜ್ ಜೈನ್(ಬಣ್ಣದ ಬಾಬು), ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಅವರನ್ನು ನೇಮಿಸಲಾಗಿದೆ.
ಸಲಹಾ ಸಮಿತಿಗೆ ಶಾಸಕ ಮಧು ಬಂಗಾರಪ್ಪ, ಡಾ. ಎಂ.ಕೆ. ಭಟ್, ಎಂ.ಎಸ್. ಕಾರ್ತಿಕ್, ಪಾಣಿ ರಾಜಪ್ಪ, ರಾಜಪ್ಪ ಮಾಸ್ತರ್, ಶ್ರೀಪಾದ ಬಿಚ್ಚುಗತ್ತಿ, ಎಸ್. ಕೃಷ್ಣಾನಂದ, ಮುಕ್ತಾಬಾಯಿ ಭಟ್, ಆಶಾ ರಂಗನಾಥ, ದತ್ತಿದಾನಿ ಮಹದೇವಪ್ಪ, ಕೆ. ಮಂಜುನಾಥ, ಎಚ್.ಎಸ್. ಮಂಜಪ್ಪ, ಚಿಕ್ಕವಾಲಿ ನಾಗರಾಜಗೌಡರು, ರಾಜಶೇಖರ್ ಪಾಟೀಲ್, ಡಾ. ವಿಶ್ವನಾಥ ನಾಡಿಗೇರ್ ಅವರನ್ನು ನೇಮಿಸಲಾಗಿದೆ.