ಬೆಳೆ ಹಾನಿ: ಪರಿಹಾರಕ್ಕೆ ಆಗ್ರಹ
ಸೊರಬ: ಅಕಾಲಿಕ ಮಳೆಯಿಂದಾಗಿ ರೈತರು ತಮ್ಮ ಬೆಳೆ ಕಳೆದುಕೊಂಡು ನಷ್ಟವನ್ನು ಅನುಭವಿಸುತ್ತಿದ್ದು, ಸರ್ಕಾರ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆಯ ಪದಾಧಿಕಾರಿಗಳು ಬುಧವಾರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ ಮಾತನಾಡಿ, ಒಂದು ಒಂದು ವಾರದಿಂದ ತಾಲೂಕಿನಾದ್ಯಂತ ಗಾಳಿ-ಮಳೆಗೆ ರೈತರು ಬೆಳೆದ ಬಾಳೆ, ಮಾವು, ಮೆಕ್ಕೆಜೋಳ ಮತ್ತು ಇತರೆ ಫಸಲುಗಳು ಹಾಳಾಗಿರುತ್ತವೆ. ಇದರಿಂದಾಗಿ ರೈತ ಸಮೂಹಕ್ಕೆ ಭರಿಸಲಾಗದಂತಹ ನಷ್ಟ ಸಂಭವಿಸಿದೆ. ಎಂದು ಹೇಳಿದರು. ತಾಲ್ಲೂಕು ಅಧ್ಯಕ್ಷ ರಭದ್ರಗೌಡ, ಉಪಾಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಶಿವಣ್ಣ ಹುಣಸವಳ್ಳಿ, ಖಜಾಂಚಿ ವೀರಬಸಪ್ಪ ಬಣಕಾರ್, ರೈತ ಮುಖಂಡ ಉಮೇಶ್ ಪಾಟೀಲ್ ಇತರರಿದ್ದರು.