ಸಂಚಾರ ವ್ಯತ್ಯಯ
ಸೊರಬ: ಕಳೆದ ಎರಡು ದಿನಗಳಿಂದ ಪಟ್ಟಣವೂ ಸೇರಿದಂತೆ ಸುತ್ತಮುತ್ತಲ ಅನೇಕ ಹಳ್ಳಿಗಳಲ್ಲಿ ಭಾರಿ ಗುಡುಗು, ಸಿಡಿಲಿನೊಂದಿಗೆ ಮಳೆಯಾಗುತ್ತಿದ್ದು, ಜನಜೀವನ ಕೊಂಚ ಅಸ್ತವ್ಯಸ್ತವಾಗಿದೆ. ಭಾರಿ ಗಾಳಿ ಬೀಸಿದ ಕಾರಣ ಕೆಲವವು ಮನೆಗಳ ಮೇಲ್ಛಾವಣಿಗೂ ಧಕ್ಕೆಯಾಗಿದೆ.
ಗುಡುಗು- ಸಿಡಿಲಿನೊಂದಿಗೆ ಮಳೆಯಿಂದಾಗಿ 2 ದಿನಗಳಿಂದ ಪಟ್ಟಣದಲ್ಲಿ ವಿದ್ಯುತ್ ಸಂಪರ್ಕಕ್ಕೆ ವ್ಯತ್ಯಯವುಂಟಾಗಿ ಮಂಗಳವಾರ ರಾತ್ರಿ ಪೂರ್ತಿ ವಿದ್ಯುತ್ ಇಲ್ಲದೇ ಪರದಾಡುವಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಗಾಳಿಯ ರಭಸ ಪ್ರಬಲವಾಗಿದ್ದರಿಂದ ಅನೇಕ ಮನೆಗಳ ತಗಡು, ಹೆಂಚುಗಳು ಗಾಳಿಗೆ ಹಾರಿವೆ. ಉಳವಿ, ಉದ್ರಿ, ಕೆರೆಕೊಪ್ಪ, ಸಂಪಗೋಡು, ಚಂದ್ರಗುತ್ತಿ ಭಾಗದ ಅನೇಕ ಗ್ರಾಮಗಳಲ್ಲಿ ಮರದ ಕೊಂಬೆಗಳು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಮಾವಿನ ಪೈರು ನಷ್ಟ: ಸೊರಬ- ಬನವಾಸಿ ರಸ್ತೆ ಮಾರ್ಗದ ಸಂಪಗೋಡು ಗ್ರಾಮದ ಬಳಿ ಹಾಗೂ ಸೊರಬ ಶಿರಾಳಕೊಪ್ಪ ರಸ್ತೆಯ ಗೇರುಕೊಪ್ಪ ಬಳಿ ಮರವೊಂದು ರಸ್ತೆ ಮಧ್ಯದಲ್ಲಿ ಗಾಳಿಗೆ ಉರುಳಿ ಬಿದ್ದಿರುವುದರಿಂದ ರಸ್ತೆ ಸಂಚಾರಕ್ಕೆ ಕೆಲವು ಹೊತ್ತು ಅಡಚಣೆ ಉಂಟಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.