ವಿಪರೀತ ಮಳೆಗೆ ಮನೆ ಗೋಡೆ ಕುಸಿತ
ಸಾಗರ: ವಿಪರೀತ ಮಳೆಯಿಂದ ಇಲ್ಲಿನ ನಗರಸಭೆ ವ್ಯಾಪ್ತಿಯ ಭೀಮನಕೋಣೆ ರಸ್ತೆಯಲ್ಲಿನ ಧರ್ಮರಾಜ್ ಹಾಗೂ ರೆಹಮಾನ್‌ಸಾಬ್ ಎಂಬುವವರ ಮನೆಯ ಗೋಡೆ ಕುಸಿದಿದೆ. ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆ ಅಧ್ಯಕ್ಷೆ ಲಲಿತಮ್ಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತುರ್ತು ಪರಿಹಾರಕ್ಕೆ ವರದಿ ಸಲ್ಲಿಸುವಂತೆ ನಗರಸಭೆ ಕಂದಾಯ ನಿರೀಕ್ಷಕರಿಗೆ ಸೂಚಿಸಿದರು.
ನಗರಸಭೆ ಸದಸ್ಯರಾದ ಪರಿಮಳ, ಪರಮೇಶ್ವರ್ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.