ಸತತ ಮಳೆ ನಡುವೆಯೇ ನಾಗರಪಂಚಮಿ
ಸೊರಬ: ಸತತ ಮಳೆಯ ನಡುವೆಯೇ ತಾಲೂಕಿನಾದ್ಯಂತ ಜನತೆ ಶ್ರದ್ಧಾಭಕ್ತಿಯಿಂದ ನಾಗರ ಪಂಚಮಿ ಆಚರಿಸಿದರು. ನಾಗ ದೇವತೆಯ ಶ್ರದ್ಧಾಕೇಂದ್ರಗಳಿರುವ ಉರಗನಹಳ್ಳಿ, ಕಪ್ಪಗಳಲೆ ಇನ್ನೂ ಮುಂತಾದೆಡೆ ವಿಶೇಷ ಪೂಜೆ ಜರುಗಿತು.ಪಟ್ಟಣದ ರಾಘವೇಂದ್ರ ಬಡಾವಣೆಯ ಆದಿ ನಾಗ ಅಶ್ವತ್ಥಕಟ್ಟೆ ನಾಗ ದೇವರಿಗೆ ಮಹಿಳೆಯರು, ಮಕ್ಕಳು ಬೆಳಗಿನಿಂದಲೇ ಹಾಲೆರೆಯುವ ದೃಶ್ಯ ಕಂಡುಬಂತು.