ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಲೆಫೆಂಟ್ ಟ್ರಂಚ್‌ಗೆ ಗ್ರಾಮಸ್ಥರ ಮನವಿ

Rashmi Kasaragodu
Updated On : 5 Aug 2014, 1:11 am

ಸೊರಬ: ಆನೆ ಹಾವಳಿಯಿಂದ ಬೇಸತ್ತಿರುವ ತಾಲೂಕಿನ ಚಿತ್ರಟೆಹಳ್ಳಿ, ಓಟೂರು, ತವನಂದಿ, ಟಿ.ಜಿ ಕೊಪ್ಪ, ಬಿಳವಗೋಡು ಗ್ರಾಮಸ್ಥರು ಎಲಿಫೆಂಟ್ ಟ್ರಂಚ್ ಕಲ್ಪಿಸಿ ಎಂದು ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಪ್ಪದ ಆನೆ ಹಾವಳಿಯಿಂದಾಗಿ ರೈತರು ಬಾಳೆ, ಅಡಿಕೆ, ತೆಂಗು, ಸಸಿ ಮಡಿ, ಜೋಳ, ಶುಂಠಿ ಸೇರಿದಂತೆ ಹಲವಾರು ಬೆಳೆಗಳನ್ನು ಕಳೆದುಕೊಂಡಾಗಿದೆ. ಆನೆ ಓಡಿಸುವ ಸಲುವಾಗಿ ಎರಡು ದಿನ ಬೆಳೆ ಮಧ್ಯದಲ್ಲಿ ಹಾಗೂ ಕಾಡಂಚಿನಲ್ಲಿ ಮೆಣಸಿನ ಹೊಗೆ ಹಾಕಲಾಗಿತ್ತು. ಹಾಗಿನಿಂದ ಕೋಪಗೊಂಡ ಆನೆ ರೈತರ ಪರಿಕರಗಳನ್ನು ನಾಶಪಡಿಸುತ್ತಿದ್ದು, ರೈತರು ಪ್ರತಿನಿತ್ಯ ಪ್ರಾಣಭಯದಿಂದ ಹೊಲಗಳಿಗೆ ಹೋಗದಂತಾಗಿದೆ. ಕೂಡಲೇ ಅರಣ್ಯ ಇಲಾಖೆ ಹಾಗೂ ಆಡಳಿತ ಸರ್ಕಾರ ಬೆಳೆ ಹಾನಿಗೆ ಪರಿಹಾರ ಮತ್ತು ಎಲಿಫೆಂಟ್ ಟ್ರಂಚ್ ಹೊಡೆಸಿ ಕೊಡಬೇಕೆಂದು ಕೋರಿದ್ದಾರೆ. ಚಿತ್ರಟೆಹಳ್ಳಿ ಗ್ರಾಮ ಸಮಿತಿ ಅಧ್ಯಕ್ಷ ಪರಸಪ್ಪ, ಕಲ್ಲಪ್ಪ ಕೆ. ಅರುಣಕುಮಾರ ಚಿದಾನಂದ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement