ಪರಿಹಾರ ದೊರಕಿಸಿ ಕೊಡುವತ್ತ ಚಿಂತಿಸಿ
ಸೊರಬ: ರಾಜಕೀಯದ ದೊಂಬರಾಟ ನಿಲ್ಲಿಸಿ, ಜನತೆಗೆ ನ್ಯಾಯೋಚಿತ ಪರಿಹಾರ ದೊರಕಿಸಿಕೊಡುವತ್ತ ಚಿಂತಿಸಿ ಎಂದು ಬಿಜೆಪಿ ಮುಖಂಡ ಸಣ್ಣಪ್ಪಮಾಕೊಪ್ಪ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ್ದಾರೆ.
ತಾಲೂಕಿನ ವರದಾ, ದಂಡಾವತಿ ನದಿಗಳ ಅರ್ಭಟದಿಂದ ಪ್ರತಿವರ್ಷ ರೈತನ ಶ್ರಮ ವ್ಯಯವಾಗುತ್ತಿದೆ. ಈ ರಾಜಕಾರಣಿಗಳು ಪಿಕ್ನಿಕ್ ಬಂದ ಹಾಗೆ ಬಂದು ರೋಡ್ ಶೋ ನಡೆಸುತ್ತಾರೆಯೆ ಹೊರತು ಯಾವೊಬ್ಬ ರೈತನ ಮನೆಗೂ ಬಂದು ಅವನ ಪರಿಸ್ಥಿತಿ ಎಂತದ್ದು ಎಂದು ನೋಡುವ ಸೌಜನ್ಯವೂ ಇಲ್ಲ, ಯೋಗ್ಯ ಪರಿಹಾರವೂ ಇಲ್ಲ. ಶಾಶ್ವತ ಅನುದಾನವೂ ಇಲ್ಲ, ಪ್ರತಿವರ್ಷ ಪೈರು ಹಾಳಾಗುತ್ತದೆ, ಇವರು ಬರುತ್ತಾರೆ, ಹೋಗುತ್ತಾರೆ ಅಷ್ಟೆ ಎಂದು ಟೀಕಿಸಿದ ಅವರು, ನೆರೆಹಾನಿಗೆ ತುತ್ತಾಗುವ ರೈತರಿಗೆ ಶಾಶ್ವತ ಪರಿಹಾರ ದೊರಕಬೇಕು. ತಮ್ಮ ಲಾಭಕ್ಕಾಗಿ ಮುಗ್ಧ ರೈತರ ಶೋಷಣೆಯನ್ನು ರಾಜಕಾರಣಿಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಕೇವಲ ಭರವಸೆಯ ಮಾತನಾಡಿದರೆ ರೈತರೊಂದಿಗೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದ್ದಾರೆ.