ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಅಭಿವೃದ್ಧಿಗೆ ಸಂಘ- ಸಂಸ್ಥೆಗಳೂ ಕೈಜೋಡಿಸಲಿ'

Lingaraj Badiger
Updated On : 4 Feb 2014, 11:28 am

ಶಿವಮೊಗ್ಗ: ಸರ್ಕಾರವೇ ಎಲ್ಲಾ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರದ ಆಶಯಗಳನ್ನು ಸಂಘ- ಸಂಸ್ಥೆಗಳು ಜನರಿಗೆ ತಲುಪಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಪೂರಕ ಕೆಲಸ ಮಾಡಬೇಕಿದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಕರೆ ನೀಡಿದರು.
ನಗರದ ಗೋಪಾಳಗೌಡ ಬಡಾವಣೆಯಲ್ಲಿ ನೂತನವಾಗಿ ಆರಂಭಗೊಂಡ ವನಸಿರಿ ಗೋಪಾಳ ಬಡಾವಣೆ ನಿವಾಸಿಗಳ ಸಂಘ ಉದ್ಘಾಟಿಸಿ ಮಾತನಾಡಿ, ಸಂಘ ಹುಟ್ಟುಹಾಕುವುದು ಸುಲಭ. ಅವುಗಳನ್ನು ಭದ್ರವಾಗಿ ರೂಪಿಸಿ ಸಮಾಜಮುಖಿ ಕೆಲಸ ಮಾಡುವ ಮೂಲಕ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ಅಭಿಪ್ರಾಯಪಟ್ಟರು.
ಸಂಘದ ಧ್ಯೇಯೋದ್ದೇಶ ವಿವರಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ ರೆಡ್ಡಿ, ಹಸಿರೀಕರಣ, ಆರೋಗ್ಯ ತಪಾಸಣೆ, ಬಡಾವಣೆಯ ಅಭಿವೃದ್ಧಿ ಸೇರಿದಂತೆ ಹತ್ತು- ಹಲವು ಯೋಜನೆ ಹಮ್ಮಿಕೊಂಡಿದೆ. ಸಾರ್ವಜನಿಕರ ಕುಂದು- ಕೊರತೆಗಳ ಬಗ್ಗೆ ದೂರುಗಳಿದ್ದಲ್ಲಿ ಸಂಘವು ಸ್ಥಾಪಿಸಿರುವ ದೂರು ಪೆಟ್ಟಿಗೆಯಲ್ಲಿ ಸಮಸ್ಯೆಯ ಸಂಪೂರ್ಣ ವಿವರವನ್ನು ವಿಳಾಸ ಸಹಿತ ಬರೆದು ಹಾಕಿದಲ್ಲಿ ಅದನ್ನು ಪರಿಶೀಲಿಸಿ ಸಂಘವು ಕ್ರಮ ಕೈಗೊಳ್ಳಲಿದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗರಾಜ್ ವಹಿಸಿದ್ದರು. ಮಹಾನಗರ ಪಾಲಿಕೆಯ ಮಹಾಪೌರರಾದ ಖುರ್ಷಿದಾಬಾನು, ಜಿಪಂ ವಿರೋಧ ಪಕ್ಷದ ನಾಯಕ ಕಲಗೋಡು ರತ್ನಾಕರ್, ನಗರಸಭಾ ಮಾಜಿ ಸದಸ್ಯ ಎನ್. ಪರಂಧಾಮ ರೆಡ್ಡಿ, ಸಂಘದ ಉಪಾಧ್ಯಕ್ಷ ಜಿ. ಚಂದ್ರಶೇಖರ್, ಖಜಾಂಚಿ ಕೃಷ್ಣಮೂರ್ತಿ, ಮೂರ್ತಿ ಗೋಪಿ, ಮುಖಂಡರಾದ ಮನೋಹರ್, ಗಣಪತಿ ಸೇರಿದಂತೆ ಇನ್ನಿತರರು ಇದ್ದರು.
--
'ಕಾಡ ಹಾದಿಯ ಬೆಳದಿಂಗಳು' ಬಿಡುಗಡೆ
ತೀರ್ಥಹಳ್ಳಿ: ಮುದ್ದು ತೀರ್ಥಹಳ್ಳಿ ಅವರ 'ಕಾಡ ಹಾದಿಯ ಬೆಳದಿಂಗಳು' ಕೃತಿಯನ್ನು ಇತ್ತೀಚೆಗೆ ಇಲ್ಲಿ ಬೆಂಗಳೂರಿನ ಸಾಹಿತಿ ಎಲ್.ಎನ್. ಮುಕುಂದರಾಜ್ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಸಚಿವ ಕಿಮ್ಮನೆ ರತ್ನಾಕರ್, ಶಿವಮೊಗ್ಗ ಡಿವಿಎಸ್ ಕಾಲೇಜಿನ ಉಪನ್ಯಾಸಕ ಡಾ. ಎಚ್.ಟಿ. ಕೃಷ್ಣಮೂರ್ತಿ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಜಯಶಂಕರ್ ಹಲಗೂರು, ಪ್ರಕಾಶಕ ವಿಷಕಂಠೇಗೌಡ ಉಪಸ್ಥಿತರಿದ್ದರು. ಸಬ್ಬನಹಳ್ಳಿ ರಾಜು ತಂಡದವರಿಂದ ಜನಪದಗೀತ ಗಾಯನ ನೆರವೇರಿತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೆಂಪೆ ದೇವರಾಜ್ ಅಧ್ಯಕ್ಷತೆ ವಹಿಸಿದ್ದರು.
ಪೋಷಕರಾದ ಲಿಡಿಯಾ ದಂಪತಿಗಳ ಮಂದಾನಿಲ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement