ಆವರ್ತ ನಿಧಿಗೆ ಒತ್ತಾಯಿಸಿ 11ರಂದು ಪ್ರತಿಭಟನೆ
ಭದ್ರಾವತಿ: ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಭದ್ರಾವತಿ ಘಟಕವು ಕಬ್ಬು ಬೆಳೆಗಾರರಿಗೆ ಮೈಸೂರು ಕಾಗದ ಕಾರ್ಖಾನೆಯ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಬಾಕಿ ಹಣ ಮತ್ತು ಕಾರ್ಖಾನೆ ಅಭಿವೃದ್ಧಿಗೆ ಬಜೆಟ್ನಲ್ಲಿ ಕಾರ್ಖಾನೆಯ ಅಭಿವೃದ್ಧಿಗೆ ಹಾಗೂ ರೈತರ ಕಬ್ಬಿನ ಸರಬರಾಜಿನ ಹಣ ಪಾವತಿಸಲು ಆವರ್ತ ನಿಧಿ ಸ್ಥಾಪಿಸಲು ಹಣವನ್ನು ಕಾಯ್ದಿರಿಸಲು ಗಮನ ಸೆಳೆಯಲು ಫೆ.11ರಂದು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಾಗೂ ರಸ್ತೆತಡೆ ಚಳವಳಿ ಹಮ್ಮಿಕೊಂಡಿದೆ.
ಎಂಪಿಎಂ ಸಕ್ಕರೆ ಕಾರ್ಖಾನೆ 2013-14ನೇ ಸಾಲಿಗೆ ಸರ್ಕಾರ ನಿಗದಿ ಪಡಿಸಿದಂತೆ ಪ್ರತಿ ಟನ್ನಿಗೆ 2500 ರಂತೆ ರೈತರು ಸರಬರಾಜು ಮಾಡಿದ ಕಬ್ಬಿನ ಹಣ ಪಾವತಿ ಮಾಡಿಲ್ಲ. ಕೂಡಲೇ ಹಣ ಪಾವತಿಸಲು ಕ್ರಮವನ್ನು ಕೈಗೊಳ್ಳಬೇಕು. ಸರ್ಕಾರಿ ಸ್ವಾಮ್ಯದ ಎಂಪಿಎಂ ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಫೆ.14ರಂದು ರಾಜ್ಯ ಸರ್ಕಾರ ಮಂಡಿಸಲಿರುವ ಬಜೆಟ್ನಲ್ಲಿ 100 ಕೋಟಿಗಳ ಅನುದಾನ ಹಾಗೂ ರೈತರು ಸರಬರಾಜು ಮಾಡಿದ ಕಬ್ಬಿನ ಹಣವನ್ನು ನೀಡಲು 250 ಕೋಟಿ ಆವರ್ತ ನಿಧಿಯನ್ನು ಸ್ಥಾಪಿಸಿ ಹಣವನ್ನು ಕಾಯ್ದಿರಿಸಬೇಕೆಂದು ಹಾಗೂ ಇವುಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಸಂಘದ ಪ್ರಕಟಣೆ ತಿಳಿಸಿದೆ.