ಇಂದು ನಮೋ ಚಹಾ ಅಭಿಯಾನ
ಶಿವಮೊಗ್ಗ: ಬಿಜೆಪಿಯು ನಮೋ ಚಹಾದೊಂದಿಗೆ ನಮ್ಮ ಪ್ರಣಾಳಿಕೆ ಕಾರ್ಯಕ್ರಮವನ್ನು ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದೆ.
ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ದೇಶ ಆಳುವುದಕ್ಕಿಂತ ಚಹ ಮಾರುವುದಕ್ಕೆ ಯೋಗ್ಯ ಎಂಬ ಕಾಂಗ್ರೆಸ್ ಮುಖಂಡ ಮಣಿ ಶಂಕರ್ ಅಯ್ಯರ್ ಹೇಳಿಕೆಯ ನಂತರ ದೇಶಾದ್ಯಂತ ಆರಂಭವಾಗಿರುವ ನಮೋ ಚಹಾ ಅಭಿಯಾನದ ಭಾಗವಾಗಿ ಇಲ್ಲಿ ಆರಂಭವಾಗುತ್ತಿದೆ.
ಫೆ.4ರಂದು ಬೆಳಗ್ಗೆ 11 ಗಂಟೆಗೆ ಶಿವಪ್ಪನಾಯಕ ವೃತ್ತದಲ್ಲಿ ಜಿಲ್ಲಾ ಯುವಮೋರ್ಚಾ ಕಾರ್ಯಕರ್ತರು ನಮೋ ಚಹಾ ವಿತರಣೆ ಮಾಡುವ ಜೊತೆಗೆ ಮತ್ತು “¬ÈÚß½ ಧ್ವನಿ-ನಮ್ಮ ®ÚÃzÛØOæ’ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಕಾರ್ಯಕ್ರಮಕ್ಕೆ ಎಲ್ಲಾ ಸ್ತರದ ಕಾರ್ಯಕರ್ತರು, ಪಕ್ಷದ ಹಿತೈಷಿಗಳು ಹಾಗೂ ಸಮಸ್ತ ನಾಗರಿಕರು ಆಗಮಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಯುವಮೋರ್ಚಾದ ಜಿಲ್ಲಾಧ್ಯಕ್ಷ ಭವಾನಿರಾವ್ ಮೋರೆ ಕೋರಿದ್ದಾರೆ.
ಪ್ರಣಾಳಿಕೆ: ನಿಮ್ಮ ಧ್ವನಿ- ನಮ್ಮ ಪ್ರಣಾಳಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕರಪತ್ರವೊಂದನ್ನು ನೀಡಲಾಗುತ್ತಿದೆ. 15 ಅಂಶಗಳ ವಿಚಾರವನ್ನು ಅದರಲ್ಲಿ ಪ್ರಸ್ತಾಪಿಸಲಾಗಿದ್ದು, ಭಾರತ ಪ್ರಜೆಯಾಗಿ ಯಾವ ವಿಚಾರದಲ್ಲಿ ಕಾಳಜಿ ವಹಿಸುತ್ತೇನೆಂಬುದನ್ನು ಸಾರ್ವಜನಿಕರು ನಮೂದಿಸುವರು.
ಒಳ್ಳೆಯ ಆಡಳಿತ, ರಾಷ್ಟ್ರೀಯ ಸುರಕ್ಷತೆ, ಮೂಲಸೌಕರ್ಯ, ಸುಸ್ಥಿರ ಆರ್ಥಿಕತೆ, ಸಾಮಾಜಿಕ ಅಭಿವೃದ್ಧಿ, ಇಂಧನ ಸುರಕ್ಷತೆ, ಆರೋಗ್ಯ, ಶಿಕ್ಷಣ, ಆರೋಗ್ಯ, ಪರಿಸರ, ಜಲ ನಿರ್ವಹಣೆ ಸೇರಿದಂತೆ ಒಟ್ಟಾರೆ 15 ಅಂಶಗಳು ಕರಪತ್ರದಲ್ಲಿವೆ.
ಅದೇ ರೀತಿ ಉತ್ತಮ ಭಾರತಕ್ಕಾಗಿ ನನ್ನ ಸಲಹೆ ಏನೆಂಬುದನ್ನು ಸಾರ್ವಜನಿಕರು ನಮೂದಿಸಲು ಅವಕಾಶ ಕಲ್ಪಿಸಲಾಗಿದೆ. ಅಷ್ಟೇ ಅಲ್ಲದೇ, ತಮ್ಮ ಲೋಕಸಭಾ ಕ್ಷೇತ್ರದ ಬೆಳವಣಿಗಾಗಿ ಸಲಹೆಗಳನ್ನು ನೀಡಲು ಅವಕಾಶ ನೀಡಲಾಗಿದೆ. ಇದರ ಜೊತೆಗೆ ಹೆಸರು, ಇ ಮೇಲ್, ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬಿಜೆಪಿ ಕಾರ್ಯಕರ್ತರಿಗೆ ಪುನಾ ಸಲ್ಲಿಸಬೇಕು. ಅದು ಪ್ರಣಾಳಿಕೆ ರಚನೆ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.