ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ತರಬೇತಿ ಪಡೆದು ಸ್ವಯಂ ಉದ್ಯೋಗಿಗಳಾಗಿ'

Lingaraj Badiger
Updated On : 4 Feb 2014, 12:47 pm

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 3
ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ಸ್ವಯಂ ಉದ್ಯೋಗ ಸೃಜನೆಗಾಗಿ ಸರ್ಕಾರವು ಅನುಷ್ಠಾನಕ್ಕೆ  ತರುವ ಯೋಜನೆಗಳಲ್ಲಿ ತರಬೇತಿ ಪಡೆದು, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೋಪಾಲ್ ಅವರು ಹೇಳಿದರು.
ಸೋಮವಾರ ನೆಹರೂ ಯುವಕೇಂದ್ರವು ತಮ್ಮ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಯುವಕರಿಗಾಗಿ ಏರ್ಪಡಿಸಲಾಗಿದ್ದ 3 ದಿನಗಳ ಯುವ ಮುಂದಾಳತ್ವ ಹಾಗೂ ಸಮುದಾಯ ತರಬೇತಿಯನ್ನು ಉದ್ಘಾಟಿಸಿ, ವಿವಿಧ ವಿಷಯಗಳಲ್ಲಿ ತರಬೇತಿ ಪಡೆದ ವಿದ್ಯಾವಂತ ಯುವಕರು ಸಂಘಟಿತರಾಗಿ ಸರ್ಕಾರದ ಅನೇಕ ಕಾರ್ಯಕ್ರಮಗಳನ್ನು ಯುವ ಜನರಿಗೆ ತಲುಪಿಸಬೇಕೆಂದರು.
ಸ್ವಚ್ಛತೆಗೂ ಆದ್ಯತೆ ನೀಡಿ: ಜಿಲ್ಲಾ ಪಂಚಾಯಿತಿಯು ಗ್ರಾಮ ಪಂಚಾಯಿತಿಗಳ ಮೂಲಕ ಗ್ರಾಮೀಣ ಯುವಕ-ಯುವತಿಯರ ಸಂಘಗಳಿಗೆ ಅನುದಾನ ನೀಡುತ್ತಿದೆ. ನಿರುದ್ಯೋಗಿಗಳು ಗ್ರಾಮ ಪಂಚಾಯಿತಿಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ, ಜಿಲ್ಲಾ ಪಂಚಾಯಿತಿಗಳಿಗೆ ತರಬೇತಿಗಾಗಿ ಅರ್ಜಿಗಳನ್ನು ಕಳುಹಿಸುವಂತೆ ಸೂಚಿಸಿದ ಅವರು, ಯುವಕರು ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಗ್ರಾಮೀಣ ಸ್ವಚ್ಛತೆ, ಜನರ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕೆಂದರು.
ಜಿಲ್ಲಾ ಪಂಚಾಯಿತಿ ಯುವಜನ ನಿರ್ದೇಶಕಿ ಉಮಾ ಡಿ. ಸದಾಶಿವ, ಕರ್ನಾಟಕ ಸರ್ಕಾರದ ಸಂಜೀವಿನ ಯೋಜನೆಯಡಿಯಲ್ಲಿ ಸ್ವಯಂ ಉದ್ಯೋಗ ಮಾಡುವವರಿಗೆ ಸಹಾಯಧನವನ್ನು ನೇರವಾಗಿ ಗ್ರಾಮ ಪಂಚಾಯಿತಿ ಮೂಲಕ ಫಲಾನುಭವಿಗಳಿಗೆ ವಿತರಿಸಲಾಗುವುದು ಎಂದರು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಯುವ ಸಮನ್ವಯಾಧಿಕಾರಿ ಜಸಿಂತ ಡಿಸೋಜ, ಶೈಲ ನಾಗರಾಜ್, ಸುರೇಶ್, ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement