ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬುಡಕಟ್ಟು ಸಮುದಾಯದ ಬೇಡಿಕೆ ಈಡೇರಿಸಲು ಮನವಿ

Lingaraj Badiger
Updated On : 4 Feb 2014, 11:28 am

ಸಾಗರ: ಬುಡಕಟ್ಟು ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲೆಯ ಕುಪ್ಪಳಿಯಿಂದ ಕರ್ನಾಟಕ ಅರಣ್ಯ ಮೂಲ ಬಡಕಟ್ಟುಗಳ ಒಕ್ಕೂಟದ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ಪಾದಯಾತ್ರೆ ಸಾಗರಕ್ಕೆ ಆಗಮಿಸಿತ್ತು.
ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಬುಡಕಟ್ಟು ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆ ಕೂಗಿದ ಕಾರ್ಯಕರ್ತರು ನಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ಜಿಲ್ಲೆಯ ಅರಣ್ಯಮೂಲ ಬುಡಕಟ್ಟುಗಳಾದ ಹಸಲರು, ಗೊಂಡರು, ಮಲೆಕುಡಿಯರು ಮತ್ತು ಮರಾಠಿ ನಾಯ್ಕ ಸಮುದಾಯಗಳ ಸಮಗ್ರ ಅಧ್ಯಯನವನ್ನು ಮಾನವಶಾಸ್ತ್ರೀಯ ಆಧಾರದ ಮೇಲೆ ಕೈಗೊಂಡು, ಅದರ ಶಿಫಾರಸಿನ ಆಧಾರದ ಮೇಲೆ ಅಭಿವೃದ್ಧಿ ಪ್ರಕ್ರಿಯೆಗಳನ್ನು ಮುಂದುವರೆಸಬೇಕು. ಬುಡಕಟ್ಟು ಜನರಿಗೆ ಉಚಿತ ಪೌಷ್ಟಿಕ ಆಹಾರ ಯೋಜನೆ ಜಾರಿ ಮಾಡಬೇಕು. ಶಿವಮೊಗ್ಗ ಜಿಲ್ಲೆಯನ್ನು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ವ್ಯಾಪ್ತಿಗೆ ತಂದು ಸಮಗ್ರ ಗಿರಿಜನ ಅಭಿವೃದ್ಧಿ ಇಲಾಖೆಯ ಕಚೇರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ 2006ರ ಅರಣ್ಯಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು ಜಿಲ್ಲೆಯ ಬುಡಕಟ್ಟು ಜನರಿಗೆ ಮನೆ ಕಟ್ಟುವ ವೆಚ್ಚವನ್ನು ಏರಿಸುವ ಕುರಿತು ಗಮನ ಹರಿಸಬೇಕು. ಒಕ್ಕೂಟದ ಮನವಿಯನ್ನು ತಕ್ಷಣ ಪರಿಗಣಿಸಿ, ಜಿಲ್ಲೆಗೆ ಸಂಬಂಧಿಸಿದಂತೆ ತುರ್ತು ಸಭೆ ಕರೆದು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಒಕ್ಕೂಟದ ಜಿಲ್ಲಾ ಸಂಚಾಲಕ ರಾಮಣ್ಣ, ಮಂಜುನಾಥ್, ಬಾಲರಾಜ್, ಉಷಾ, ಶ್ರೀನಾಥ್, ಲಕ್ಷ್ಮಮ್ಮ ರೇಣುಕಾ, ಉಷಾದೇವಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement