ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ನಿಜಲಿಂಗಪ್ಪಗೌಡ ಆಯ್ಕೆ: ಅಭಿನಂದನೆ

Lingaraj Badiger
Updated On : 4 Feb 2014, 11:29 am

ಶಿಕಾರಿಪುರ: ಪಟ್ಟಣದ ಪ್ರತಿಷ್ಠಿತ ಶಿವ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ನಿಜಲಿಂಗಪ್ಪಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬ್ಯಾಂಕಿನ 16ನೇ ವಾರ್ಷಿಕ ಸಮಾರಂಭದಲ್ಲಿ ನಿಜಲಿಂಗಪ್ಪಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಬ್ಯಾಂಕ್ ಕಡಿಮೆ ಅವಧಿಯಲ್ಲಿ ಅತೀ ಹೆಚ್ಚಿನ ವಹಿವಾಟಿನ ಮೂಲಕ ಪಟ್ಟಣದ ಪ್ರತಿಷ್ಠಿತ ಸಹಕಾರಿ ಬ್ಯಾಂಕಿನಲ್ಲಿ ಮುಂಚೂಣಿಯಲ್ಲಿದ್ದು, ಬ್ಯಾಂಕಿನ ಪ್ರಗತಿಗೆ ಪೂರಕವಾಗಿ ಹೆಚ್ಚಿನ ರೀತಿಯಲ್ಲಿ ಶ್ರಮಿಸುವುದಾಗಿ ತಿಳಿಸಿದರು.
ಸದಸ್ಯರ ಸಹಿತ ಎಲ್ಲರ ಸಹಕಾರ ಅತ್ಯಗತ್ಯವಾಗಿದ್ದು, ಬ್ಯಾಂಕಿನ ಶಾಖೆಯನ್ನು ಶಿರಾಳಕೊಪ್ಪದಲ್ಲಿ ಆರಂಭಿಸಲು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.
ಕಾಡಾ ಮಾಜಿ ಅಧ್ಯಕ್ಷ, ತಾ.ವೀರಶೈವ ಸಮಾಜದ ಮುಖಂಡ, ಬ್ಯಾಂಕಿನ ನಿರ್ದೇಶಕ ಕೆ.ಶೇಖರಪ್ಪ ಮಾತನಾಡಿ, ಬ್ಯಾಂಕಿನ 16 ವರ್ಷದ ಇತಿಹಾಸದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ಇಲ್ಲದೆ ಅವಿರೋಧವಾಗಿ ಆಯ್ಕೆಯಾಗುವ ಪರಂಪರೆಗೆ ಪೂರಕವಾಗಿ ಇದೀಗ ನೂತನ ಅಧ್ಯಕ್ಷರನ್ನು ಆಯ್ಕೆಗೊಳಿಸಿರುವುದಾಗಿ ತಿಳಿಸಿದರು.
ಪರಮಪೂಜ್ಯ ಶ್ರೀ 1108 ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳ ಸದಾಶಯದಂತೆ ಸಹಮತ ಒಮ್ಮತ ಸರ್ವಾನುಮತದ ಆಯ್ಕೆ ಮುಂದುವರಿದಿದೆ ಎಂದರು.
ಬ್ಯಾಂಕಿಂಗ್ ವ್ಯವಹಾರದ ಜತೆಗೆ ಇ-ಸ್ಟಾಂಪಿಂಗ್, ಇ-ಟಿಕೆಟಿಂಗ್, ಸಹಿತ ವಿನೂತನ ಸೇವೆ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಸದುದ್ದೇಶವನ್ನು ಹೊಂದಲಾಗಿದೆ. ಭವಿಷ್ಯದಲ್ಲಿ ಗ್ರಾಹಕರ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುವ ದೃಢ ಹೆಜ್ಜೆಯನ್ನು ಬ್ಯಾಂಕ್ ಕೈಗೊಳ್ಳಲಿದೆ ಎಂದರು.
ಬ್ಯಾಂಕಿನ ನಿರ್ದೇಶಕ ಕೆ.ಪಿ ಮಂಜುನಾಥ್, ಎಚ್.ಆರ್. ಯೋಗೇಶಪ್ಪ, ದಾನೇಂದ್ರಪ್ಪ, ಮಲ್ಲಪ್ಪ, ವಿಜಯಕುಮಾರ್, ಬಸವನಗೌಡ, ಪುಷ್ಪಾ ಮಂಜಪ್ಪ, ಪರಮೇಶ್ವರಪ್ಪ, ಪ್ರಭಂದಕ ಬಸವರಾಜಪ್ಪ, ಅಧಿಕಾರಿ ಗಂಗೊಳ್ಳಿ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ವಾಸುದೇವ್ ಕಾರ್ಯನಿರ್ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement