ಕಸಮುಕ್ತ ಪಟ್ಟಣಕ್ಕೆ ಮುಂದಾಗಿ: ಜಿಲ್ಲಾಧಿಕಾರಿ
ಶಿರಾಳಕೊಪ್ಪ: ಚುನಾವಣೆ ನೀತಿ ಸಂಹಿತೆ ಯಾವ ಸಂದರ್ಭದಲ್ಲಿಯಾದರೂ ಘೋಷಣೆ ಆಗಹುದು. ಈ ತಿಂಗಳ ಒಳಗೆ ಅಥವಾ ಆದಷ್ಟು ಬೇಗ ಕೆಲಸ ಕಾರ್ಯಗಳನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು.
ಶಿರಾಳಕೊಪ್ಪ ಪಪಂಗೆ ಭೇಟಿ ನೀಡಿ ಎಲ್ಲಾ ದಾಖಲೆಯನ್ನು ವೀಕ್ಷಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ದಂಡಹಾಕಿ: ಪಪಂ ಆಶ್ರಯದಲ್ಲಿ ಕಸಮುಕ್ತ ಪಟ್ಟಣ ಮಾಡಬೇಕು ಎಂದು ಹಲವಾರು ಯೋಜನೆ ರೂಪಿಸಲಾಗಿದೆ.ಪ್ರತಿದಿನ ಕಸ ಸಂಗ್ರಹಕ್ಕೆ ಹೋದಾಗ ಒಣಕಸ- ಹಸಿಕಸ ಬೇರೆ ಇಡುವಂತೆ ತಿಳಿಸಿದರೂ, ನಾಗರಿಕರು ಒಟ್ಟಾಗಿ ಸೇರಿಸುತ್ತಾರೆ ಎಂದು ಸಿಬ್ಬಂದಿ ಅವರ ಗಮನ ಸೆಳೆದಾಗ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಿ, ದಂಡಹಾಕಲು ಹಿಂದೆ ಮುಂದೆ ನೋಡಬೇಡಿ ಎಂದರು.
ನಾಡ ಕಚೇರಿಗೆ ಭೇಟಿ: ನಾಡಕಚೇರಿಯಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿದ ಜಿಲ್ಲಾಧಿಕಾರಿಗಳು ಖುದ್ದು, ತಾವೇ ಕಂಪ್ಯೂಟರ್ ದಾಖಲೆ ವೀಕ್ಷಿಸಿ, ಸಮಸ್ಯೆ ಬಗ್ಗೆ ಪ್ರಶ್ನಿಸಿದರು.
ಶಿರಾಳಕೊಪ್ಪ ನಾಡಕಚೇರಿಯಲ್ಲಿ 21ಸಿಬ್ಬಂದಿ ಇರುವ ಸ್ಥಳದಲ್ಲಿ ಕೇವಲ 7 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ಉಪ ತಹಸೀಲ್ದಾರ್ ಇಲ್ಲ. ರೆವಿನ್ಯೂ ಇನ್ಸ್‌ಪೆಕ್ಟರ್ ಇಲ್ಲ ಎಂದಾಗ ಎಲ್ಲಾ ಸ್ಥಳಗಳನ್ನು ಚುನಾವಣೆ ನಂತರ ತುಂಬಲಾಗುವುದು ಎಂದರು.
ಜಿಲ್ಲಾಧಿಕಾರಿಗಳೊಂದಿಗೆ ತಹಸೀಲ್ದಾರ್ ಧರ್ಮೋಜಿರಾವ್, ಉಪತಹಸೀಲ್ದಾರ್ ಆನಂದ ಗರಡಿ, ಪಪಂ ಮುಖ್ಯಾಧಿಕಾರಿ ರಾಜ್ ಕುಮಾರ್ ಹಾಗೂ ಎಲ್ಲಾ ಸಿಬ್ಬಂದಿ ಪಪಂ ಚುನಾಯಿತ ಪ್ರತಿನಿಧಿಗಳು ಹಾಜರಿದ್ದರು.