ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಯುವಜನರು ಪ್ರಾಮಾಣಿಕ ಬದುಕು ಕಟ್ಟಿಕೊಳ್ಳಲಿ'

Vishwanath S
Updated On : 8 Feb 2014, 1:49 am

ಶಿರಾಳಕೊಪ್ಪ:  ಕನ್ನಡಪರ ಹೋರಾಟವೆಂದರೆ ನಮ್ಮ ಗಟ್ಟಿತನ ಹೆಚ್ಚಿಸಿಕೊಳ್ಳುವುದು. ಹಾಗೆಯೇ ನಮ್ಮ ಭಾಷೆ ಕಲಿಯಬೇಕು ಎಂಬುದಾಗಿದೆಯೇ ವಿನಹ ತಮಿಳು, ತೆಲಗು, ಮರಾಠಿ ಭಾಷೆಗಳ ವಿರುದ್ಧ ಅಲ್ಲ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿರಾಳಕೊಪ್ಪ ಕಸಪ ಘಟಕ ಕಾಲೇಜಿನ ಸಹಯೋಗದೊಂದಿಗೆ ನಡೆದ ದತ್ತಿ ಕಾರ್ಯಕ್ರಮದಲ್ಲಿ “OÚ«Ú­sÚ®ÚÁÚ ÔæàÞÁÛlVÚ×Úß’ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಪ್ರಾಮಾಣಿಕವಾಗಿ ಬದುಕು ಕಟ್ಟಿಕೊಳ್ಳಲು ಯುವಜನಾಂಗ ಪ್ರಯತ್ನಿಸಬೇಕು. ಇತರ ಭಾಷೆಗೆ ಮರುಳಾಗಿ ಕನ್ನಡ ಮರೆಯುವುದು ಸಲ್ಲದು. ನಮ್ಮ ಮಾತ್ರುಭಾಷೆ ಕಲಿಯಬೇಕು. 2500 ವರ್ಷ ಇತಿಹಾಸ ಹೊಂದಿರುವ ಕನ್ನಡ ಭಾಷೆ ಎಂದೂ ನಶಿಸುವುದಿಲ್ಲ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಎಚ್.ರಾಜೇಶ್ವರಿ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.
ಪ್ರಾರಂಭದಲ್ಲಿ ತಾಲೂಕು ಕಸಪ ಅಧ್ಯಕ್ಷ ಶಿವರಂಜನಿ ಸುದರ್ಶನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಾಳಕೊಪ್ಪ ಕಸಪ ಘಟಕದ ಎನ್.ಜಿ. ನಾಗರಾಜ್ ವಹಿಸಿ ಮಾತನಾಡಿದರು.
ದತ್ತಿದಾನಿಗಳಾದ ಬಿ.ಡಿ. ಸಿದ್ದಪ್ಪಳವರ, ಫಕ್ಕೀರಮ್ಮ ಮಂಜುನಾಥ, ಕಸಾಪ ತಾಲೂಕು ಕಾರ್ಯದರ್ಶಿ ಚಿನ್ನಪ್ಪ ಓಬಳೇರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸೂರಹೊನ್ನಿ ಚಂದ್ರಶೇಖರ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement