ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿವಿಧೆಡೆ ಏಕಮುಖ ಸಂಚಾರ ನಿಯಮ

Vishwanath S
Updated On : 8 Feb 2014, 1:26 am

ಶಿವಮೊಗ್ಗ:  ನಗರದ ವಾಹನದಟ್ಟಣೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಿವಿಧ ಕ್ರಮ ಕೈಗೊಂಡಿದೆ. ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ.  ಜೈಲ್ ವೃತ್ತದಿಂದ ಲಕ್ಷ್ಮೀ ಟಾಕೀಸ್ ಕಡೆಗೆ ಏಕಮುಖ ಸಂಚಾರವಾಗುತ್ತಿದೆ. ಅದೇ ರೀತಿ ರವೀಂದ್ರ ನಗರ ನೂರಡಿ ರಸ್ತೆಯಿಂದ ಕುವೆಂಪು ರಸ್ತೆಗೆ ಬರುವ ರಸ್ತೆಯಲ್ಲಿ (ಜಿಪಂ ಪಕ್ಕದ ರಸ್ತೆ) ಏಕಮುಖ ಸಂಚಾರ ವ್ಯವಸ್ಥೆ ಮತ್ತು ಜೈಲ್ ರಸ್ತೆಯಲ್ಲಿ ಎರಡೂ ಬದಿಗೆ ದಿನಬಿಟ್ಟು ದಿನ ವಾಹನ ನಿಲುಗಡೆ ಮಾಡುವ ಕುರಿತು ಆದೇಶ ಹೊರಟಿದೆ. ಜೈಲ್ ವೃತ್ತದ ಕಡೆಯಿಂದ ಲಕ್ಷ್ಮೀಟಾಕೀಸ್‌ವರೆಗೆ ಸಿಟಿ ಬಸ್ ಹೊರತುಪಡಿಸಿ ಭಾರಿ ವಾಹನ ಸಂಚಾರ ನಿಷೇಧಿಸಿದೆ. ಜೈಲ್ ರಸ್ತೆಯಲ್ಲಿ ಭಾರೀ ಮತ್ತು ಲಘು ಲಗೇಜ್ ವಾಹನಗಳಿಗೆ ಮಧ್ಯಾಹ್ನ 2 ರಿಂದ 4 ರವರೆಗೆ ಮತ್ತು ರಾತ್ರಿ 9 ರಿಂದ ಬೆಳಗ್ಗೆ 9 ರವರೆಗೆ ಲೋಡಿಂಗ್, ಅನ್‌ಲೋಡಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement