ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೇಳದಲ್ಲಿ ನೈಜ ಪ್ರತಿಭೆ ಪ್ರದರ್ಶನವಾಗಲಿ: ನಾಗರತ್ನ

Mainashree
Updated On : 10 Feb 2014, 12:31 pm

ಹೊಸನಗರ: ಯುವಜನ ಮೇಳಗಳಲ್ಲಿ ಕೇವಲ ಸ್ಪರ್ಧಿಸುವ ಸಲುವಾಗಿಯೇ ಪಾಲ್ಗೊಳ್ಳದೇ, ತಮ್ಮಲ್ಲಿನ ನೈಜ ಪ್ರತಿಭೆ ಅನಾವರಣಗೊಳಿಸಲು ಪ್ರಯತ್ನಿಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ನಾಗರತ್ನ ದೇವರಾಜ್ ಹೇಳಿದರು.
ತಾಲೂಕಿನ ಕಾರಣಗಿರಿಯಲ್ಲಿ ನಡೆದ ತಾಲೂಕು ಮಟ್ಟದ ಯುವಜನ ಮೇಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಶುಭಾ ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಕಾರಗಡಿ ಜಯರಾಮ್, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಸದಸ್ಯೆ ಹೇಮಾವತಿ, ಹನಿಯ ಸುಬ್ಬಣ್ಣ, ಶೀಲಾ ರಾಮನ್ ಮತ್ತಿತರರು ಹಾಜರಿದ್ದರು.
ಕಲಾವಿದೆ ಕಡೆಗಣನೆ:  15 ವರ್ಷಗಳಿಂದ ಯುವಜನ ಮೇಳಗಳಲ್ಲಿ ಭಾಗವಹಿಸಿ, ಹತ್ತಾರು ಯುವಜನ ಮೇಳಗಳಲ್ಲಿ ತೀರ್ಪುಗಾರರಾಗಿ ನೇಮಕಗೊಂಡಿದ್ದ ನನ್ನನ್ನು ಕಾರಣಗಿರಿ ಯುವಜನ ಮೇಳಕ್ಕೆ ಬೇಕೆಂದೇ ಆಹ್ವಾನಿಸದೆ ಅವಮಾನಿಸಿದ್ದಾರೆ ಎಂದು ಕಿರುತೆರೆ, ಆಕಾಶವಾಣಿ ಕಲಾವಿದೆ, ಮೇಲಿನ ಬೇಸಿಗೆ ಗ್ರಾಪಂ ಅಧ್ಯಕ್ಷೆ ನೆಲ್ಲುಂಡೆ ಲಲಿತಾ ಆರೋಪಿಸಿದ್ದಾರೆ.
ಕಾರಣಗಿರಿ ನಮ್ಮ ಗ್ರಾಪಂ ವ್ಯಾಪ್ತಿಯ ಪ್ರದೇಶವನ್ನು ಹೊಂದಿದೆ. ಪಕ್ಕದ ಗ್ರಾಪಂ ಅಧ್ಯಕ್ಷೆಯನ್ನು ವೇದಿಕೆಗೆ ಕರೆಯುವ ಸೌಜನ್ಯ ತೋರಿಲ್ಲ. ಅದಿರಲಿ ಹತ್ತಾರು ವರ್ಷಗಳ ತೀರ್ಪುಗಾರರಾಗಿ ಯುವಜನ ಮೇಳಗಳಲ್ಲಿ  ದುಡಿದ ನನ್ನನ್ನು ನನ್ನ ಊರು ಮನೆಯಲ್ಲಿ ನಡೆದ ಮೇಳಕ್ಕೆ ಆಯ್ಕೆ ಮಾಡದೆ ನಿಜವಾದ ಕಲಾವಿದೆಗೆ ಅವಮಾನ ಮಾಡಿದ್ದಾರೆ. ಕಲಾವಿದೆ, ಗ್ರಾ.ಪಂ ಅಧ್ಯಕ್ಷೆಯನ್ನು ವ್ಯವಸ್ಥಿತವಾಗಿ ಕಡೆಗಣಿಸಿ ಅವಮಾನ ಮಾಡುವಲ್ಲಿ ಯಾರ್ಯಾರ ಕೈವಾಡ ಕೆಲಸ ಮಾಡಿದೆ ಎಂದು ಇಲಾಖೆಗೆ ಪತ್ರ ಬರೆದು ಸ್ಪಷ್ಟನೆ ಕೇಳಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement