ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರದಲ್ಲಿ ರಂಗಮಂದಿರ: ಭರವಸೆ

Mainashree
Updated On : 10 Feb 2014, 12:31 pm

ಸಾಗರ: ಮಕ್ಕಳು ಹಾಗೂ ಪೋಷಕರು ಕಾಲಕಾಲಕ್ಕೆ ಸಂಘಟನೆಗೆ ಒತ್ತಾಸೆಯಾಗಿ ನಿಂತರೆ ಸಾಂಸ್ಕೃತಿಕ ಸಂಘಟನೆಗಳು ಸದೃಢವಾಗಿ ಬೆಳೆಯುತ್ತವೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಗಾಯತ್ರಿ ನಾಟ್ಯ ಮಂದಿರ ಹಾಗೂ ಶಿವಮೊಗ್ಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕಲೋತ್ಸವ-2014  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಮಂದಿರ ನಿರ್ಮಾಣ: ಸಾಗರದ ಹೃದಯಭಾಗದಲ್ಲಿ ಸಾಂಸ್ಕೃತಿಕ ಆಸಕ್ತರ ಆಶಯದಂತೆ ದಿ.ದೇವರಾಜು ಅರಸು ಹೆಸರಿನಲ್ಲಿ ಸುಸಜ್ಜಿತ ಒಳಾಂಗಣ ರಂಗಮಂದಿರವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು, ಶೀಘ್ರದಲ್ಲಿಯೆ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶಿವಮೊಗ್ಗದ ಸಂಗೀತ ಗುರುಗಳಾದ ವಿದುಷಿ ಪಾರ್ವತಮ್ಮ ಎಸ್.ಗವಾಯಿ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಆರ್.ನಾಗಭೂಷಣ್ ಹಾಜರಿದ್ದರು.
ನೃತ್ಯ ರೂಪಕ: ನಾಟ್ಯಮಂದಿರದ ಮುಖ್ಯಸ್ಥೆ ವಿದುಷಿ ಪ್ರತಿಮಾ ನಿಜಗುಣ ಶಿವಯೋಗಿ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ನಾಗೇಶ್ ಸ್ವಾಗತಿಸಿ, ಚೇತನಾ ಅರುಣಕುಮಾರ್ ವಂದಿಸಿದರು. ಡಾ.ಕೆಳದಿ ವೆಂಕಟೇಶ್ ಜೋಯಿಸ್ ನಿರೂಪಿಸಿದರು.
ನಾಟ್ಯಮಂದಿರ ವಿದ್ಯಾರ್ಥಿಗಳಿಂದ ಭರತನಾಟ್ಯ, ಜನಪದ ನೃತ್ಯ, ಕರ್ನಾಟಕ ಸಂಗೀತ, ವಚನ ಗಾಯನ, ಕಂಸಾಳೆ ನೃತ್ಯ, ಶ್ರೀಕೃಷ್ಣ ಲೀಲಾಮೃತ ನೃತ್ಯ ರೂಪಕ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement