ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುದ್ದಿ ಸಂಕ್ಷೇಪ

Mainashree
Updated On : 10 Feb 2014, 12:32 pm

ನಾಳೆ ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಶಿವಮೊಗ್ಗದ 110/ 11ಕೆ.ವಿ. ಮಂಡ್ಲಿ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ 20 ಎಂವಿಎ ಪರಿವರ್ತಕದ ದುರಸ್ತಿ ಕಾರ್ಯವನ್ನು ಬೃಹತ್ ಕಾಮಗಾರಿ ವಿಭಾಗದವರು ಕೈಗೆತ್ತಿಕೊಳ್ಳುತ್ತಿರುವುದರಿಂದ, ಫೆ.11 ರಂದು ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ಎನ್.ಟಿ. ರಸ್ತೆ, ಗಾಜನೂರು ನಗರ ಸಭೆಗಳ ವಾಟರ್ ವರ್ಕ್ಸ್, ಕೆ.ಆರ್. ವಾಟರ್ ವರ್ಕ್ಸ್, ಓ.ಟಿ. ರಸ್ತೆ, ಕಲ್ಲೂರು-ಮಂಡ್ಲಿ, ನ್ಯೂ ಮಂಡ್ಲಿ, ಇಂಡಸ್ಟ್ರಿಯಲ್ ಏರಿಯಾ, ಸವಾಯಿ ಪಾಳ್ಯ, ಸೀಗೆಹಟ್ಟಿ, ಕೆ.ಆರ್.ಪುರಂ ರಸ್ತೆ, ವಂದನ ಟಾಕೀಸ್ ರಸ್ತೆ, ಎಸ್. ಸಿದ್ದಯ್ಯ ರಸ್ತೆ, ಗಾಂಧಿ ಬಜಾರ್, ಕುಂಬಾರಗುಂಡಿ, ಬಿ.ಬಿ.ರಸ್ತೆ, ಆಜಾದ್ ನಗರ, ಕಲ್ಲಪ್ಪನ ಕೇರಿ, ಟಿ.ಎಸ್.ಆರ್. ರಸ್ತೆ, ರವಿ ವರ್ಮ ಬೀದಿ, ಮಂಜುನಾಥ ಬಡಾವಣೆ, ಬಿ.ಎಚ್. ರಸ್ತೆ, ಗಾರ್ಡನ್ ಏರಿಯಾ, ನೆಹರು ರಸ್ತೆ, ಹೊಸಹಳ್ಳಿ, ಹೊನ್ನಾಪುರ, ಸಕ್ರೆಬೈಲು, ಹೊಸಕೊಪ್ಪ, ರಾಮನಕೊಪ್ಪ, ಬಸಾಪುರ, ಅಗಸವಳ್ಳಿ, ಪುರದಾಳು, ಅನುಪಿನಕಟ್ಟೆ, ಹಾಯ್ ಹೊಳೆ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದ್ದು, ಗ್ರಾಹಕರು ಸಹಕರಿಸಲು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಸಚಿವ ರತ್ನಾಕರ್
ಜಿಲ್ಲಾ ಪ್ರವಾಸ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರು ಫೆಬ್ರವರಿ ಫೆ.10 ರಂದು ಬೆಳಿಗ್ಗೆ 10 ಗಂಟೆಗೆ ತ್ಯಾರಂದೂರಿನಲ್ಲಿ ಮಲ್ನಾಡ್ ರಬ್ಬರ್ ಉತ್ಪಾದಕರ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 11.30ಕ್ಕೆ ತೀರ್ಥಹಳ್ಳಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ನಡೆಯುವ ಶಿವಮೊಗ್ಗ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಕಾರ್ಯಾಗಾರದಲ್ಲಿ ಭಾಗವಹಿಸುವರು. ಮಧ್ಯಾಹ್ನ 3.15ಕ್ಕೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. 3.30ಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಯಿಂದ ಸ್ತ್ರೀ ಶಕ್ತಿ ಸಂಘಗಳಿಂದ ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಸಂಚಾರಿ ವಾಹನ ಉದ್ಘಾಟಿಸುವರು.
ರಥೋತ್ಸವ
ಶಿರಾಳಕೊಪ್ಪ: ಇಲ್ಲಿನ ಉಡಗಣಿ ರಾಘವೇಂದ್ರಸ್ವಾಮಿ ಸನ್ನಿಧಿಯಲ್ಲಿ ಮಧ್ವನವಮಿ ಕಾರ್ಯಕ್ರಮದ ಪ್ರಯುಕ್ತ ರಥೋತ್ಸವ ನಡೆಯಿತು. ಟ್ರಸ್ಟ್ ಅಧ್ಯಕ್ಷ ರಾಜೀವ ದಂಪತಿಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸುತ್ತಮುತ್ತಲ ಪ್ರದೇಶದ ಭಕ್ತರು ಉತ್ಸವದಲ್ಲಿ ಭಾಗವಹಿಸಿ ಭಕ್ತಿ ಮೆರೆದರು. ರಥೋತ್ಸವದ ಮೊದಲು ವಾಯುಸ್ತುತಿ ಹೋಮ ನಡೆಸಲಾಯಿತು. ನಂತರ ಮಠದಲ್ಲಿ ವಿಶೇಷ ಪೂಜೆ ಮಹಾಮಂಗಳಾರತಿ ನಡೆಸಲಾಯಿತು. ಅನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಮಧ್ವರ ಬಗ್ಗೆ ರಾಘವೇಂದ್ರ ಪ್ರವಚನ ನಡೆಸಿಕೊಟ್ಟರು. ನಂತರ ಪಲ್ಲಕ್ಕಿ ಸೇವೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement