ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪ್ರೀತಿ ವಿಷಯಕ್ಕೆ ಜಗಳ: ವ್ಯಕ್ತಿ ಸಾವು

Rashmi Kasaragodu
Updated On : 11 Feb 2014, 1:39 am

ಸಾಗರ: ಪ್ರೀತಿ ಪ್ರೇಮದ ವಿಷಯಕ್ಕೆ ಸಂಬಂಧಪಟ್ಟಂತೆ ಇಬ್ಬರ ನಡುವೆ ನಡೆದ ಜಗಳದಲ್ಲಿ ಓರ್ವ ವಿಷ ಸೇವಿಸಿ ಮೃತಪಟ್ಟ ಘಟನೆ ತಾಲೂಕಿನ ಜಂಬಾನಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಜಂಬಾನಿ ಗ್ರಾಮದ ಶ್ರೀಧರ್ (40) ಮೃತಪಟ್ಟ ದುರ್ದೈವಿ. ಫೆ.5ರಂದು ಜಂಬಾನಿ ಗ್ರಾಮದ ಶ್ರೀಧರ್ ಹಾಗೂ ಅದೇ ಗ್ರಾಮದ ಮೋಹನ ಎಂಬವರ ನಡುವೆ ಜಗಳ ನಡೆದಿದೆ. ಶ್ರೀಧರನ ಚಿಕ್ಕಪ್ಪನ ಮಗ ಸಂತೋಷ್ ಹಾಗೂ ಮೋಹನನ ನಾದಿನಿ ಇಬ್ಬರೂ ಪ್ರೀತಿಸುತ್ತಿದ್ದರು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಫೆ.5ರಂದು ಮೋಹನ್ ತನ್ನ ಸ್ನೇಹಿತರೊಂದಿಗೆ ಶ್ರೀಧರ್ ಅವರ ಮೇಲೆ ಹಲ್ಲೆ ನಡೆಸಿದ್ದ. ನಂತರ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಾಗಿ, ತಮ್ಮ ಮೇಲೆ ಶ್ರೀಧರ್ ಹಲ್ಲೆ ಮಾಡಿದ್ದಾನೆ ಎಂದು ಗ್ರಾಮಾಂತರ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಿದ್ದಾನೆ. ಅದೇ ದಿನ ವಿಷ ಕುಡಿದು ತೀವ್ರ ಅಸ್ವಸ್ಥಗೊಂಡಿದ್ದ ಶ್ರೀಧರನನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತರಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ನಂತರ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದೆ ಶ್ರೀಧರ್ ಫೆ.7ರಂದು ಸಂಜೆ ಮೃತಪಟ್ಟಿದ್ದಾರೆ.
ಈ ಸಂಬಂಧ ಶ್ರೀಧರ್ ಪತ್ನಿ ಯಶೋಧ ಗ್ರಾಮಾಂತರ ಠಾಣೆಯಲ್ಲಿ ತನ್ನ ಪತಿ ಸಾವಿಗೆ ಗುರುಮೂರ್ತಿ ಕಲಸೆ, ಪ್ರದೀಪ್ ಹುತ್ತಾದಿಂಬ ಹಾಗೂ ಮೋಹನ ಜಂಬಾನಿ ಇನ್ನಿತರರು ಕಾರಣ ಎಂದು ದೂರು ನೀಡಿದ್ದಾರೆ. ದೂರಿನಲ್ಲಿ ಫೆ.5ರಂದು ಮೋಹನ್ ತನ್ನ ಸ್ನೇಹಿತರಾದ ಗುರುಮೂರ್ತಿ ಕಲಸೆ, ಪ್ರದೀಪ್ ಹುತ್ತಾದಿಂಬ ಇನ್ನಿತರರೊಂದಿಗೆ ಸೇರಿಕೊಂಡು ಮನೆಗೆ ನುಗ್ಗಿ ನನ್ನ ಪತಿ ಶ್ರೀಧರ್ ಅವರಿಗೆ ಒತ್ತಾಯಪೂರ್ವಕವಾಗಿ ವಿಷ ಕುಡಿಸಿ, ನನ್ನ ಹಾಗೂ ನನ್ನ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದರೋಡೆ ಪ್ರಕರಣ ಭೇದಿಸಿದ ಪೊಲೀಸರು
ಭದ್ರಾವತಿ: ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ಭದ್ರಾವತಿ ಗ್ರಾಮಾಂತರ ಪೊಲೀಸರು ಅತಿದೊಡ್ಡ ದರೋಡೆ ಪ್ರಕರಣವನ್ನು ಸೋಮವಾರ ಬಯಲಿಗೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಟೆಲಿವಿಷನ್, ಡಿಜಿಟಲ್ ಕ್ಯಾಮೆರಾ, ಐಪ್ಯಾಡ್, ಲ್ಯಾಪ್‌ಟ್ಯಾಪ್, ಮೊಬೈಲ್ ಫೋನ್‌ಗಳು ಹೀಗೆ ಲಕ್ಷಾಂತರ ರು.ಗಳ ಬೆಲೆಬಾಳುವ ವಿದ್ಯುನ್ಮಾನ ಉಪಕರಣಗಳನ್ನು ಕಳ್ಳತನ ಮಾಡುತ್ತಿದ್ದ ಹತ್ತು ಹನ್ನೆರಡು ಜನರನ್ನು ಬಂಧಿಸಿ ಅವರಿಂದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದೆ.
ಜೂಜಾಟ: ನಾಲ್ವರ ಬಂಧನ
ಪಟ್ಟಣದ ಕನಕ ಮಂಟಪದ ಹಿಂದಿರುವ ಕನ್ಸರ್ವೆನ್ಸಿ ರಸ್ತೆಯಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ರವೀಂದ್ರಸಿಂಗ್ ಮತ್ತಿತರ ನಾಲ್ವರ ಮೇಲೆ ಹಳೇನಗರ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ 5990 ನಗದು ವಶಪಡಿಸಿಕೊಂಡಿದ್ದಾರೆ.
ಅಕ್ರಮ ಮದ್ಯ: ಕಬಳಿಕಟ್ಟೆ ಬಳಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿನಯಕುಮಾರ್ ಎಂಬವರಿಂದ ಸುಮಾರು 1266 ಮೌಲ್ಯದ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಗ್ರಾಮಸ್ಥರ ಪ್ರತಿಭಟನೆ
ಭಾನುವಾರ ಶಿವಮೊಗ್ಗದಿಂದ ಶ್ರೀಧರ್ ಶವವನ್ನು ಜಂಬಾನಿಗೆ ತಂದಾಗ ಗ್ರಾಮಸ್ಥರು ಸಾವಿಗೆ ಕಾರಣವಾದವರನ್ನು ಬಂಧಿಸುವವರೆಗೂ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಆರೋಪಿಗಳನ್ನು ತಕ್ಷಣ ಬಂಧಿಸುವ ಭರವಸೆ ನೀಡಿದರೂ ಗ್ರಾಮಸ್ಥರು ತಮ್ಮ ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ. ಈ ಸಂದರ್ಭದಲ್ಲಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಇನ್ನಿತರ ಹಿರಿಯ ಗ್ರಾಮಸ್ಥರು ರಾಜಿ ಪಂಚಾಯ್ತಿ ಮಾಡಿಸಿ, ಶವ ಸಂಸ್ಕಾರ ನೆರವೇರಿಸಲು ಸಹಕರಿಸಿದರು. ಶ್ರೀಧರ ಅವರ ಪತ್ನಿ ಯಶೋಧ ನೀಡಿರುವ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement