ಮನುಷ್ಯನಿಗೆ ಸಂಸ್ಕಾರ ಅತ್ಯಗತ್ಯ: ಸೋಂದಾಶ್ರೀ
ಸಾಗರ: ಮನುಷ್ಯನಿಗೆ ಸಂಸ್ಕಾರ ಅಗತ್ಯವಾಗಿ ಬೇಕು ಎಂದು ಸೋಂದಾ ಮಠದ ಶ್ರೀಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳವರು ಹೇಳಿದರು. ತಾಲೂಕಿನ ವಳಗೆರೆಯಲ್ಲಿರುವ ಗುಡ್ಡದ ಬಸದಿಯಲ್ಲಿ ಸಹಸ್ರಪಣಿ 1008 ಪಾಶ್ರ್ವನಾಥ ತೀರ್ಥಂಕರ, ಚತುರ್ವಂಶತಿ ತೀರ್ಥಂಕರರು ಹಾಗೂ ಮಾನಸ್ಥಂಭೋಪರಿ ಚತುರ್ಮುಖ ಜಿನಬಿಂಬಗಳ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅಧ್ಯಾಪಕ ಮುನಿರಾಜ ರೆಂಜಾಳ ಮಾತನಾಡಿದರು. ಶ್ರೀಕ್ಷೇತ್ರ ಹೊಂಬುಜದ ಶ್ರೀ ಶ್ರೀದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವಳಗೆರೆ ಕಡೇಮನೆ ಪಿ. ಪದ್ಮರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ವಿ.ಸಿ. ಪಾರ್ಶ್ವನಾಥ ಮೊದಲಾದವರು ಹಾಜರಿದ್ದರು.