ಮಾರಾಮಾರಿ ಹಿನ್ನೆಲೆ ಕೈದಿಗಳ ಸ್ಥಳಾಂತರ
ಶಿವಮೊಗ್ಗ: ಮಾರಾಮಾರಿ ಹಿನ್ನೆಲೆ ಆಯ್ದ ಕೈದಿಗಳನ್ನು ಶಿವಮೊಗ್ಗ ಜೈಲಿನಿಂದ ರಾಜ್ಯದ ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪೊಲೀಸಸರು ಆರಂಭಿಸಿದ್ದಾರೆ.
ಸೋಮವಾರ ತಡರಾತ್ರಿ 12.30ಕ್ಕೆ ರೌಡಿ ಶೀಟರ್‌ಗಳಾದ ಸ್ಪಾಟ್ ನಾಗ (ಬೆಳಗಾವಿ ಜೈಲಿಗೆ), ಕಡ್ಡಿ ಮಧು (ಗುಲ್ಬರ್ಗಕ್ಕೆ) ಹಾಗೂ ನವುಲೆ ಆನಂದ (ಬಿಜಾಪುರ ಜೈಲಿಗೆ) ಅವರನ್ನು ಶಿವಮೊಗ್ಗ ಜೈಲಿನಿಂದ ಕರೆದೊಯ್ಯಲಾಯಿತು. ಇನ್ನಷ್ಟು ಕೈದಿಗಳನ್ನು ಸ್ಥಳಾಂತರಿಸಲು ಇಲಾಖೆ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ಶಿವಕುಮಾರ್, ಜೈಲಿನ ವಾತಾವರಣ ಹದಗೆಡಿಸುತ್ತಿದ್ದ ಕಾರಣ ಇವರನ್ನು ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.