ಇಂದು ದತ್ತಿ ಉಪನ್ಯಾಸ
ಸಾಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕೆಳದಿ ವಸ್ತು ಸಂಗ್ರಹಾಲಯ ಮತ್ತು ಇತಿಹಾಸ ಸಂಶೋಧನಾ ಕೇಂದ್ರ ಇವರ ಆಶ್ರಯದಲ್ಲಿ ರಸಗ್ರಹಣ ಮತ್ತು ಸಿರಿವಂತೆ ಶ್ರೀ ತ್ರಿಪುರಾಂತಕೇಶ್ವರ ಯಕ್ಷಗಾನ ಮಂಡಳಿ ದಿ.ಅಮಚಿ ಲಕ್ಷ್ಮೀನಾರಾಯಣ ಪಟೇಲರ ಸ್ಮರಣಾರ್ಥ ನೀಡಿದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಫೆ.12ರಂದು ಬೆಳಿಗ್ಗೆ 10-30ಕ್ಕೆ ಕೆಳದಿ ವಸ್ತು ಸಂಗ್ರಹಾಲಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ರಸಗ್ರಹಣ ಕವಿರಾಜಮಾರ್ಗ ಕುರಿತು ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ, ತಾಳಮದ್ದಲೆ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ಚಿಂತಕ ದೇವೇಂದ್ರ ಬೆಳೆಯೂರು ಮಾತನಾಡಲಿದ್ದಾರೆ.
ಕಸಾಪ ತಾಲೂಕು ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಸಂಶೋಧಕ ಡಾ.ಕೆಳದಿ ಗುಂಡಾ ಜೋಯಿಸ್, ಸಿರಿವಂತೆ ತ್ರಿಪುರಾಂತಕೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷ ಡಿ.ವಿ.ಶಿವರಾಮಯ್ಯ ಭಾಗವಹಿಸುವರು.