ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮತ್ಸ್ಯಮೇಳ ರದ್ದುಗೊಳಿಸಿ'

Rashmi Kasaragodu
Updated On : 12 Feb 2014, 1:53 am

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.11 ಕುವೆಂಪು ರಂಗಮಂದಿರಕ್ಕಿರುವ ಪಾವಿತ್ರ್ಯತೆ ಅಂಬೇಡ್ಕರ್ ಭವನಕ್ಕೂ ಇದೆ ಎಂದು ಪ್ರತಿಪಾದಿಸಿರುವ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಭವನ ಆವರಣದಲ್ಲಿ ಫೆ.15ರಿಂದ ಮೂರು ದಿನ ಮೀನುಗಾರಿಕೆ ಇಲಾಖೆ ನಡೆಸಲು ಉದ್ದೇಶಿಸಿರುವ ಮತ್ಸ್ಯ ಮೇಳ ಕಾರ್ಯಕ್ರಮ ತಕ್ಷಣವೇ ರದ್ದುಪಡಿಸಬೇಕೆಂದು ಆಗ್ರಹಿಸಿದೆ.
ಅಂಬೇಡ್ಕರ್ ಭವನ ದಲಿತರ ಕನಸಿನ ಕೂಸು. ಕುವೆಂಪು ರಂಗಮಂದಿರದಷ್ಟೇ ಸಾಂಸ್ಕೃತಿಕ ಮಹತ್ವವುಳ್ಳ ಭವನ. ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆಸಬಾರದಾಗಿರುವ ಎಲ್ಲಾ ಕಾರ್ಯಕ್ರಮಗಳನ್ನು ಅಂಬೇಡ್ಕರ್ ಭವನದಲ್ಲಿ ಉದ್ದೇಶಪೂರ್ವಕವಾಗಿ ನಡೆಸಲಾಗುತ್ತಿದೆ.
ಖಂಡನೀಯ: ಇದಕ್ಕೆ ತಾಜಾ ಉದಾಹರಣೆ ಮೀನುಗಾರಿಕೆ ಇಲಾಖೆ ಆಯೋಜಿಸಿರುವ ಮತ್ಸ್ಯಮೇಳ (ಮೀನಿನ ಖಾದ್ಯ ಮತ್ತು ಶಾಖಾಹಾರಿ ತಿನಿಸು) ಕಾರ್ಯಕ್ರಮ. ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರುವುದು ಅತ್ಯಂತ ಖಂಡನೀಯ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಅವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಅಂಬೇಡ್ಕರ್ ಭವನ ಸಂಪೂರ್ಣ ಹಾಳಾಗಿ ಹೋಗಿದ್ದು, ಭವನದ ದುರಸ್ತಿ ಕಾರ್ಯವನ್ನು ತಕ್ಷಣವೇ ಆರಂಭಿಸಬೇಕೆಂದು ಸಮಿತಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುವುದರ ಮೂಲಕ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ದುರಸ್ತಿ ಮಾಡಿಸುತ್ತೇವೆಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ ಮತ್ತು ಶಾಸಕ ಪ್ರಸನ್ನಕುಮಾರ್  ಅವರ ಸಮ್ಮುಖದಲ್ಲಿ ಜಿಲ್ಲಾಡಳಿತ ಭರವಸೆಯನ್ನೂ ನೀಡಿತ್ತು. ಬದಲಿಗೆ ಮತ್ಸ್ಯಮೇಳ ನಡೆಸಲು ಹೊರಟಿರುವುದು ಉದ್ದೇಶಪೂರ್ವಕ ಕೃತ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಅಂಬೇಡ್ಕರ್ ಭವನದ ಪಾವಿತ್ರ್ಯತೆಗೆ ದಕ್ಕೆ ತರಲಾಗುತ್ತಿದೆ ಎಂದಿದ್ದಾರೆ.
ರದ್ದುಪಡಿಸಿ: ಇದು ಅಂಬೇಡ್ಕರ್ ಮತ್ತು ದಲಿತರಿಗೆ ಮಾಡಿರುವ ದೊಡ್ಡ ಅಪಮಾನ. ತಕ್ಷಣವೇ ಜಿಲ್ಲಾಡಳಿತ ಮತ್ಸ್ಯಮೇಳ ರದ್ದುಪಡಿಸಬೇಕು. ಇನ್ನೆರಡು ದಿನಗಳೊಳಗೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ರದ್ದುಪಡಿಸದಿದ್ದರೆ, ಕಾರ್ಯಕ್ರಮ ನಡೆಯುವ ದಿನ ಸಮಿತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement