ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೇಂದ್ರಕ್ಕೆ ಹೋದರೂ ರಾಜ್ಯವನ್ನು ಮರೆಯಲ್ಲ

Rashmi Kasaragodu
Updated On : 13 Feb 2014, 11:38 am

ಕ.ಪ್ರ.ವಾರ್ತೆ    ಹೊಸನಗರ್ಣ ಫೆ. 12
ಎಲ್ಲಾ ರೀತಿಯ ಅಧಿಕಾರ ನೋಡಿರುವ ನನಗೆ ಚುನಾವಣೆ ಸ್ಪರ್ಧೆ ಅಗತ್ಯವಿಲ್ಲ. ಆದರೆ ದೇಶದ ಉಳಿವಿಗಾಗಿ, ಮೋದಿಯವರನ್ನು ಪ್ರಧಾನಿಯಾಗಿಸಲು ಪಕ್ಷದ ಸೂಚನೆಯಂತೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದು ದೆಹಲಿಗೆ ಹೋದರೂ ಕರ್ನಾಟಕವನ್ನು ಮರೆಯೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಬುಧವಾರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಅಭಿಮಾನವಿಟ್ಟು ಅಧಿಕಾರ: ರಾಜ್ಯದ ಜನರು ತಮ್ಮ ಮೇಲೆ ಅಭಿಮಾನವಿಟ್ಟು ಅಧಿಕಾರ ನೀಡಿದ್ದಾರೆ. ಆ ಅವಧಿಯಲ್ಲಿ ಜಾತಿ ಧರ್ಮ ನೋಡದೇ ಎಲ್ಲರಿಗೆ ಅನುಕೂಲವಾಗುವಂತಹ ಕಾರ್ಯಕ್ರಮ ರೂಪಿಸಿ ಅವರ ಋಣ ತೀರಿಸುವ ಪ್ರಯತ್ನ ಮಾಡಿದ್ದೇನೆ ಎಂಗಪು.
ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ತು ಸದಸ್ಯ ಸಿದ್ದರಾಮಣ್ಣ, ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ, ಮಾಜಿ ಶಾಸಕ ಆರಗ ಜ್ಞಾನೇಂದ್ರ, ತಾಪಂ ಅಧ್ಯಕ್ಷೆ ನಾಗರತ್ನಾ ದೇವರಾಜ್,  ತಾಪಂ ಸದಸ್ಯೆ ಜಯಲಕ್ಷ್ಮಿ ವೆಂಕಟೇಶ ಆಚಾರ್, ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಎಂ.ಎನ್. ಸುಧಾಕರ್, ಎ.ವಿ. ಮಲ್ಲಿಕಾರ್ಜುನ್, ವಾಲೆಮನೆ ಶಿವಕುಮಾರ್, ಬಿ. ಯುವರಾಜ್, ಎನ್.ಆರ್. ದೇವಾನಂದ್, ಪ್ರಹ್ಲಾದ್, ದೊಡ್ಲೇಪಾಲು ಚಂದ್ರಶೇಖರ್, ಸೋಮಶೇಖರ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement