'ಶ್ರಮದಾನದಿಂದ ಆರೋಗ್ಯ ವೃದ್ಧಿ'
ಜೋಗ್‌ಫಾಲ್ಸ್: ಶ್ರಮದಾನದಿಂದ ಆರೋಗ್ಯ ಅಭಿವೃದ್ಧಿಯಾಗುವುದರೊಂದಿಗೆ, ಊರಿನ ಸ್ವಚ್ಛತೆಯನ್ನು ಉಳಿಸಿಕೊಂಡಂತಾಗುತ್ತದೆ. ಉತ್ತಮ ರಸ್ತೆ ಸಂಪರ್ಕ ಹಳ್ಳಿಯ ಅಭಿವೃದ್ಧಿಯ ಸಂಕೇತ ಎಂಬುದಾಗಿ ಗ್ರಾಮಾಭಿವೃದ್ಧಿ ಯೋಜನೆಯ ಸೇವಾನಿರತ ಸಚಿನ್ ಜಿ. ತಿಳಿಸಿದರು.
ಇಲ್ಲಿಗೆ ಸಮೀಪದ ಹೆನ್ನಿ ಒಕ್ಕೂಟದ ವತಿಯಿಂದ ರಸ್ತೆ ಶ್ರಮದಾನದ ಕಾಮಗಾರಿ ಚಾಲನೆ ನೀಡಿ ಅವರು ಮಾತನಾಡಿ, ಶ್ರಮದಾನದಿಂದ ಸ್ಥಳೀಯರಲ್ಲಿ ಒಗ್ಗಟ್ಟು, ಉಲ್ಲಾಸ, ಸಂತಸ ಅದಕ್ಕಿಂತಲೂ ಹೆಚ್ಚು ಆತ್ಮತೃಪ್ತಿ ಉಂಟಾಗುತ್ತದೆ ಎಂದರು. ಜೋಗ್ ಒಕ್ಕೂಟದ ಅಧ್ಯಕ್ಷ ರಾಮಪ್ಪ, ಶಿಕ್ಷಕ ಡಿ. ಮಂಜಪ್ಪ, ಇದ್ದರು. ಈ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಗೆ ಶ್ರಮದಾನ ನಡೆಯಿತು.