ಸದಸ್ಯತ್ವ ಅಭಿಯಾನ
ಹೊಸನಗರ: ದೇಶದಲ್ಲಿ ಸಾಮಾಜಿಕ ಬದಲಾವಣೆ ತರಲು ಈ ಬಾರಿ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಪಕ್ಷದ ತಾಲೂಕು ಸಂಚಾಲಕ ವಾಟಗೋಡು ಸುರೇಶ್ ಕೋರಿದರು. ತಾಲೂಕಿನ ಮಾವಿನಕೊಪ್ಪದಲ್ಲಿ ಬುಧವಾರ ಆಮ್‌ಆದ್ಮಿ ಪಕ್ಷದ ಬೂತ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು. ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ದೇಶದಲ್ಲೆಲ್ಲೆಡೆ ಬದಲಾವಣೆ ಗಾಳಿ ಬೀಸುತ್ತಿದೆ. ಜನರು ದಹಲಿಯಂತೆ ಲೋಕಸಭಾ ಚುನಾವಣೆಗಳಲ್ಲಿಯೂ ಹೊಸ ಮುಖ ಮತ್ತು ಯುವಕರಿಗೆ ಆದ್ಯತೆನೀಡಲಿದ್ದಾರೆ. ಜನರಿಗೆ ಅಧಿಕಾರ, ಜನಪರ ಸರ್ಕಾರ ಎಂಬ ಘೋಷವಾಕ್ಯವಿಟ್ಟುಕೊಂಡಿರುವ ಆಮ್ ಆದ್ಮಿ ಪಕ್ಷ ದೇಶಾದ್ಯಂತ ಹೆಚ್ಚಿನ ಸ್ಥಾನ ಗಳಿಸಲಿದೆ. ರಾಜ್ಯದಲ್ಲಿಯೂ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ತಾಲೂಕಿನಲ್ಲಿ ಪ್ರತಿ ಬೂತ್‌ನಲ್ಲಿಯೂ ನಾಲ್ಕೈದು ಸಕ್ರಿಯ ಕಾರ್ಯಕರ್ತರನ್ನು ಗುರುತಿಸಿ ಈಗಿಂದಲೇ ಜನಸಂಪರ್ಕ ಪ್ರಾರಂಭಿಸಲಾಗುವುದು. ಪಕ್ಷದ ಸದಸ್ಯತ್ವ ಸಭಿಯಾನಕ್ಕೂ ಚಾಲನೆ ನೀಡಲಾಗಿದ್ದು, ಯುವಕರು ಸ್ವಯಂ ಪ್ರೇರಿತರಾಗಿ ಆನ್ ಲೈನ್ ಮೂಲಕ ಸದಸ್ಯತ್ವ ಸ್ವೀಕರಿಸುತ್ತಿದ್ದಾರೆ ಎಂದು ತಿಳಿಸಿದರು. ಪ್ರಮುಖರಾದ ವಸಂತ್ ಕುಮಾರ್, ದೂಗೂರು ಪರಮೇಶ್ವರ್, ವಿದ್ಯಾಧರ ಭಟ್, ಈಶ್ವರಪ್ಪ ತಟಗೋಡು, ಗುಡ್ಡೇಕೊಪ್ಪ ಪ್ರವೀಣ್, ಬೋಜಪ್ಪ ಮೊದಲಾದವರು ಇದ್ದರು.