ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಗರ ನಗರಸಭಾ ವ್ಯಾಪ್ತಿ ಜಾತ್ರಾ ಪ್ರದೇಶವೆಂದು ಘೋಷಣೆ

Rashmi Kasaragodu
Updated On : 13 Feb 2014, 11:32 am

ಕ.ಪ್ರ.ವಾರ್ತೆ    ಶಿವಮೊಗ್ಗ    ಫೆ. 12
ಸಾಗರದ ಮಾರಿಕಾಂಬ ಜಾತ್ರಾ ಸಮಿತಿ ಫೆ.18ರಿಂದ 26ರವರೆಗೆ ಸಾಗರದಲ್ಲಿ ಮಾರಿಕಾಂಬಾ ಜಾತ್ರೆ ನಡೆಸಲು ಜಿಲ್ಲಾಡಳಿತಕ್ಕೆ ಅನುಮತಿ ಕೋರಿರುವ ಹಿನ್ನೆಲೆಯಲ್ಲಿ ಸಾಗರದ ನಗರಸಭಾ ವ್ಯಾಪ್ತಿಯನ್ನು ಜಾತ್ರಾ ಪ್ರದೇಶವೆಂದು ಘೋಷಿಸಿ, ಕೆಲವು ಷರತ್ತುಗಳಿಗೊಳಪಟ್ಟು ಜಾತ್ರೆ ನಡೆಸಲು ಜಿಲ್ಲಾಧಿಕಾರಿ ವಿಫುಲ್ ಬನ್ಸಲ್ ಅನುಮತಿ ನೀಡಿದ್ದಾರೆ.
ಜಾತ್ರಾ ಸಮಿತಿ ಸ್ಥಳೀಯ ನಗರಸಭೆ ಸಹಕಾರದೊಂದಿಗೆ ಜಾತ್ರಾ ಸಮಯದಲ್ಲಿ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡುವುದರೊಂದಿಗೆ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಜಾತ್ರೆಯ ಲೆಕ್ಕಪತ್ರ ಮತ್ತು ದಿನನಿತ್ಯದ ಆದಾಯದ ಬಗ್ಗೆ ಸಾಗರದ ತಹಶೀಲ್ದಾರ್ ಅವರಿಗೆ ವಿವರ ನೀಡಬೇಕು. ಜಾತ್ರಾ ನಂತರ 10 ದಿನಗಳೊಳಗಾಗಿ ಲೆಖ್ಖಪತ್ರದ ವಿವರವನ್ನು ಸಾಗರದ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement