ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

17ರಂದು ವಾರ್ಷಿಕೋತ್ಸವ

Vishwanath S
Updated On : 14 Feb 2014, 1:56 am

ಕ.ಪ್ರ.ವಾರ್ತೆ, ಭದ್ರಾವತಿ, ಫೆ.13
ಪ್ರತಿ ವರ್ಷದಂತೆ ಈ ಬಾರಿಯೂ ಸಹ್ಯಾದ್ರಿ ಸುಗಮ ಸಂಗೀತ ಅಕಾಡೆಮಿಯ ವಾರ್ಷಿಕೋತ್ಸವ ಸಮಾರಂಭದಲ್ಲಿ ದಿ. ಬಾಲಗಂಗಾಧರನಾಥ ಸ್ವಾಮಿ ಅವರ ಭಾವಚಿತ್ರದ ಮೆರವಣಿಗೆ ಮತ್ತು ಸಂಗೀತ ಮತ್ತು ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷ ಎಸ್.ಬಿ.ಶಿವಲಿಂಗಪ್ಪ ತಿಳಿಸಿದರು.
ಗುರುವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17ರಂದು ಪಟ್ಟಣದ ಜಯಶ್ರೀ ಕಲ್ಯಾಣ ಪಂಟಪದಲ್ಲಿ ನಡೆಯುವ ಅಕಾಡೆಮಿಯ 9ನೇ ವಾರ್ಷಿಕೋತ್ಸವ ಅಂಗವಾಗಿ ಸಂಜೆ 4  ಗಂಟೆಗೆ ರಾಜ್ಯಮಟ್ಟದ ಭಾವಗೀತೆ, ಜಾನಪದಗೀತೆ ಮತ್ತು ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ಪ್ರವೇಶಕ್ಕೂ 25 ಶುಲ್ಕವಿದೆ. ಅಂದು ಅದೇ ಸಮಯದಲ್ಲಿ ಜಿಲ್ಲಾಮಟ್ಟದ ರಂಗೋಲಿ ಸ್ಪರ್ಧೆ ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ:  ಅಂದು ಸಂಜೆ 5 ಗಂಟೆಗೆ ಜಯಶ್ರೀ ವೃತ್ತದಿಂದ ಜಯಶ್ರೀ ಕಲ್ಯಾಣ ಮಂಟಪದವರೆಗೆ ವಾದ್ಯಮೇಳ, ಜಾನಪದಮೇಳ ಹಾಗೂ ಡೊಳ್ಳು ಕುಣಿತ ತಂಡಗಳೊಂದಿಗೆ ಶ್ರೀಬಾಲಗಂಗಾಧರನಾಥ ಸ್ವಾಮಿಗಳ ಭಾವಚಿತ್ರದ ಮೆರವಣಿಗೆ ನಡೆಯುವುದು. ನಂತರ ಕಲ್ಯಾಣ ಮಂಟಪದಲ್ಲಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್ (ಅಪೇಕ್ಷ ಮಂಜುನಾಥ್) ಮತ್ತು ಜೂನಿಯರ್ ಅಂಬರೀಶ್ (ಲಿಂಗಾರಾಧ್ಯ) ಜೋಡಿಯ ನೃತ್ಯ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯುವುದು.
ಜಿ.ಮಹಂತೇಶ್ ಅವರಿಂದ ಜಾನಪದ ಸೌರಭ, ಆನಂದಮಾದಲಗೆರೆ ವಿಜಯ ಹಾವನೂರ್, ಭದ್ರಾವತಿ ವಾಸು ಇವರಿಂದ ಸುಗಮ ಸಂಗೀತ, ಜಯರಾಮು ಕುಲಕರ್ಣಿ ಅವರಿಂದ ಹಿಂದೂಸ್ತಾನಿ ಗಾಯನ ಹಾಗೂ ಪುಷ್ಪ ಸದಾಶಿವಯ್ಯ ಮತ್ತು ಮರಿಸ್ವಾಮಿ ಅವರಿಂದ ಹಳೆಯ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ನಡೆಯುವುದು.
  ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಡಿ ಸುಚಿತ್ರ ಗೋಪಾಲ್ ಅವರ ಸುಗಮ ಸಂಗೀತ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದೆ ಎಂದು ಶಿವಲಿಂಗಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಖಜಾಂಚಿ ಬಿ.ಎನ್. ರಾಮಸ್ವಾಮಿ ಮತ್ತು ವಿದೂಷಿ ಲಲಿತಮ್ಮ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement