ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸುರಕ್ಷಿತ ವಲಯ ವಿರೋಧಿ ಹೋರಾಟಕ್ಕೆ ಬೆಂಬಲ

Vishwanath S
Updated On : 15 Feb 2014, 12:24 pm

ಹೊಸನಗರ: ತಾಲೂಕಿನ ಮಸಗಲ್ಲಿಯ ಉದ್ದೇಶಿತ ಸುರಕ್ಷಿತ ವಲಯ ಸ್ಥಳಕ್ಕೆ ಭೇಟಿ ನೀಡಿದ ವೃಕ್ಷಲಕ್ಷ ಆಂದೋಲನದ ಅನಂತ ಹಗಡೆ ಅಶೀಸರ ಗ್ರಾಮಸ್ಥರ ಸುರಕ್ಷಿತ ವಲಯ ವಿರೋಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಭಾಗದಲ್ಲಿ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ವ್ಯಾಪಕ ಅರಣ್ಯ ನಾಶದ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು ಹೊಸನಗರ ತಾಲೂಕಿನ ಈ ಭಾಗ ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶವಾಗಿದ್ದು, ಗಣಿಗಾರಿಕೆಯಿಂದ ಪರಿಸರ ಮತ್ತು ವಾತಾವರಣದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದರು.
ಅಭಿವೃದ್ಧಿ ಹೆಸರಲ್ಲಿ ಪರಿಸರ ನಾಶಪಡಿಸಿದರೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ ಹೊರುತ್ತಾರೆ. ಅರಣ್ಯ ಪ್ರದೇಶದಲ್ಲಿ ಸುರಕ್ಷಿತ ವಲಯಕ್ಕೆ ಹೇಗೆ ಅನುಮತಿ ನೀಡಲು ಬರುತ್ತದೆ ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಸರ್ಕಾರ ಮತ್ತು ನ್ಯಾಯಾಲಯಕ್ಕೆ ಸಮರ್ಪಕವಾಗಿ ಮನವರಿಕೆ ಮಾಡಿಕೊಡುವ ಅಗತ್ಯವಿದೆ. ಮುಂದಿನ ಕಾರ್ಯವಿಧಾನದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ವೃಕ್ಷಲಕ್ಷ ಆಂದೋಲನದ ಹನಿಯಾ ರವಿ, ಸುಬ್ರಹ್ಮಣ್ಯ ಚಕ್ರವಾಕ, ಹಕ್ರೆ ಸುಬ್ಬರಾವ್, ಬನವಾಸಿ ರಘುನಂದನ್, ಮೂಲಿಕಾ ತಜ್ಞ ಉಮಾಪತಿ ಭಟ್, ವಿಶ್ವನಾಥ ಹೆಗಡೆ ಹಾಗೂ ಗ್ರಾಮಸ್ಥರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement