ಇಂದು ಪುಸ್ತಕ ಬಿಡುಗಡೆ
ಶಿವಮೊಗ್ಗ: ಟಿಪ್ಪು ಸುಲ್ತಾನ್ ಕುರಿತು ತಲಕಾಡು ಚಿಕ್ಕರಂಗೇಗೌಡರು ರಚಿಸಿರುವ 'ಟಿಪ್ಪು ಸುಲ್ತಾನ್ ಕಾಲದ ಪ್ರಸಂಗಗಳು' ಪುಸ್ತಕದ ಬಿಡುಗಡೆ ಸಮಾರಂಭವು ಫೆ.16ರಂದು ಸಂಜೆ 5 ಗಂಟೆಗೆ ತುಂಗಾನಗರ ಸರ್ಕಲ್ ಬಳಿ ನಡೆಯಲಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಅಫ್ತಾಬ್ ಪರ್ವಿಜ್, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು. ಇದೇ ಕಾರ್ಯಕ್ರಮದ ಹಿನ್ನೆಲೆ ಫೆ.15ರಂದು ಮಧ್ಯಾಹ್ನ 3 ಗಂಟೆಗೆ ದ್ವಿಚಕ್ರ, ತ್ರಿಚಕ್ರ ವಾಹನ ರ್ಯಾಲಿ ಏರ್ಪಡಿಸಲಾಗಿದೆ. ಸಂಘಟನೆಯ ಕಚೇರಿಯಿಂದ ಆರಂಭವಾಗಿ ತಿಲಕ್ ನಗರ ಮುಖ್ಯರಸ್ತೆ, ಮಹಾವೀರ ವೃತ್ತ, ಅಮೀರ ಅಹ್ಮದ್ ವೃತ್ತ, ಅಶೋಕ ವೃತ್ತ ಮೂಲಕ ತುಂಗಾ ನಗರ ತಲುಪಲಿದೆ ಎಂದು ಹೇಳಿದರು. ಅಲ್ಲಾಭಕ್ಷ, ಹಾಫೀಜ್, ಗುಲ್ಜಾರ್, ಪರ್ವೀಜ್, ಇಮ್ರಾನ್, ರಶೀದ್ ಮೊದಲಾದವರು ಇದ್ದರು.