ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಕಲಿ ತಾಮ್ರದ ತಂತಿ ಮಾರಾಟ: ಮೂವರ ಸೆರೆ

Mainashree
Updated On : 16 Feb 2014, 11:19 am

ಹೊಸನಗರ: ನಕಲಿ ತಾಮ್ರದ ತಂತಿ ಅಸಲಿ ಎಂದು ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಮೂವರನ್ನು ಬಂಧಿಸಿದ ಘಟನೆ ತಾಲೂಕಿನ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉತ್ತರ ಪ್ರದೇಶದ ಮಹಮದ್ ಸಾಹಿದ್, ಮಹಮದ್ ಅಸ್ಲಾಂ, ಮಹಮದ್ ರಹೀಸ್ ಎಂಬುವವರು ಬಂಧಿತ ಆರೋಪಿಗಳು. ಶನಿವಾರ ಬೆಳಿಗ್ಗೆ ನೂಲಿಗ್ಗೇರಿಯ ಗುಜರಿ ಅಂಗಡಿಗೆ ನಕಲಿ ತಾಮ್ರದ ತಂತಿ ಅಸಲಿ ಎಂದು ಮಾರಾಟಮಾಡುತ್ತಿದ್ದ ವೇಳೆ ಅನುಮಾನಗೊಂಡ ಗುಜರಿ ಅಂಗಡಿಯ ಯಾಸಿನ್ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಇಂದು ಸಭೆ
ಭದ್ರಾವತಿ: ಮಾ.1ರಂದು ಭದ್ರಾವತಿ ತಾಲೂಕು 4ನೇ ತಾಲೂಕುಮಟ್ಟದ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿರುವ ಹಿನ್ನೆಲೆ 16ರ ಬೆಳಗ್ಗೆ 10.30ಕ್ಕೆ ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜಿನಲ್ಲಿ ಸಮ್ಮೇಳನದ ಆಯೋಜನೆಯ ಬಗ್ಗೆ ಚರ್ಚಿಸಲು ಸರ್ವಸದಸ್ಯರ ಸಭೆಯನ್ನು ಕರೆಯಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement