ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಲ್ಲಿಕಾರ್ಜುನ ಗೌಡರ ಸಾಧನೆ ಸ್ಮರಣೀಯ

Mainashree
Updated On : 16 Feb 2014, 11:19 am

ಸೊರಬ: ದೇವರಣ ಆಚರಣೆಯಂತಹ ಮೂಡನಂಬಿಕೆಯನ್ನು ತೊಡೆದು ಹಾಕುವಲ್ಲಿ ಗೌಡರು ಕೈಗೊಂಡ ಕಾರ್ಯ ಅವಿಸ್ಮರಣೀಯ ಎಂದು ಸಾಹಿತಿ ನಾ.ಡಿಸೋಜ ಅವರು ಸ್ವಾತಂತ್ರ್ಯ ಹೋರಾಟಗಾರ ಎಣ್ಣೆಕೊಪ್ಪದ ದಿ.ಮಲ್ಲಿಕಾರ್ಜುನ ಗೌಡರನ್ನು ನೆನಪಿಸಿಕೊಂಡರು.
ತಾಲ್ಲೂಕು ಎಣ್ಣೆಕೊಪ್ಪದ ದಿ.ಮಲ್ಲಿಕಾರ್ಜುನ ಗೌಡರ ಮನೆಗೆ ಭೇಟಿ ನೀಡಿದ್ದ ಅವರು, ಇಲ್ಲಿನ ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಚಂದ್ರಗುತ್ತಿಯಲ್ಲಿ  ಸ್ವತಃ ತಾವೆ ನಿಂತು, ಹೆಣ್ಣು ಮಕ್ಕಳ ಜಟೆಯನ್ನು ಕತ್ತರಿಸುವ ಮೂಲಕ ದೇವರಣ ಪದ್ಧತಿಯನ್ನು ಬಿಡುವಂತೆ ಮನವೊಲಿಸಿದ ಅವರ ಮನೆ ಸ್ವಾತಂತ್ರ್ಯ ದೇವರುಗಳ ಸಂಗಮ ನಿವಾಸವಾಗಿತ್ತು ಎಂದರು.
ಸರ್ವೋದಯ ಗ್ರಾಮ: ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯದ ರೂಪರೇಷೆಗಳು ಗೌಡರ ಮನೆಯಲ್ಲಿ ತಯಾರಾಗುತ್ತಿತ್ತು, ಜಿಲ್ಲೆಯ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಗಾರರ ಕೆಚ್ಚೆದೆಯ ಗ್ರಾಮವಾಗಿದ್ದರೆ, ಎಣ್ಣೆಕೊಪ್ಪ ಗ್ರಾಮ ಗಾಂಧಿ ಅನುಯಾಯಿಗಳ, ಸುಭಾಶ್ಚಂದ್ರ ಅಭಿಮಾನಿಗಳ ಆತಿಥ್ಯದ ತಾಣವಾಗಿತ್ತು, ಸರ್ವೋದಯ ಗ್ರಾಮವಾಗಿ ಸ್ವಾಭಿಮಾನ ಸಂಕೇತದ ಖಾದಿ ನೂಲು ತೆಗೆಯುವ ಕೇಂದ್ರವಾಗಿತ್ತು ಎಂದರು.
ದಿವಂಗತರ ಕುಟುಂಬ ವರ್ಗದವರೊಂದಿಗೆ ಅವರ ಮನೆಯಲ್ಲಿ ಕೆಲಕಾಲ ಕುಶಲೋಪರಿ ಮಾತನಾಡಿದ ಬಳಿಕ ಸರ್ವೋದಯ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಶ್ವಾಸ ಭಾರತ ರೂವಾರಿ ಸದಾನಂದಗೌಡರು ಸರ್ವೋದಯ ಭಾರತ ಗೀತೆ ಹಾಡಿದರು.
ಸರ್ವೋದಯ ಪ್ರೌಡಶಾಲೆ ಮುಖ್ಯೋಪಾಧ್ಯಾಯ ನಂಜುಂಡಪ್ಪ, ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ಭಜಂತ್ರಿ, ಸಹ ಶಿಕ್ಷಕರಾದ ದೇವರಾಜ್, ವೆಂಕಟೇಶ್ ನಾಯ್ಕ್, ಕುಮಾರ್, ಹಂಪಣ್ಣ, ರುದ್ರನಾಯ್ಕ್, ಸುರೇಶಗೌಡ, ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement