ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹಳ್ಳಿಗಳಲ್ಲಿ ಮಾತ್ರ ಬದುಕಿನ ಜೀವಂತಿಕೆ

Lingaraj Badiger
Updated On : 17 Feb 2014, 10:59 am

ಹೊಸನಗರ: ನಗರ ಪ್ರದೇಶದ ನಿವಾಸಿಗಳು ಯಾಂತ್ರೀಕೃತ ಬದುಕಿಗೆ ಶರಣಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ಬದುಕಿನ ಜೀವಂತಿಕೆ ನೋಡಬಹುದಾಗಿದೆ ಎಂದು ಹಿರಿಯ ರಂಗ ಕಲಾವಿದ ಎಸ್.ಎನ್.ಸೇತುರಾಮ್ ಅಭಿಪ್ರಾಯಪಟ್ಟರು.
ಪಟ್ಣಣದ 133 ವಸಂತಗಳನ್ನು ಕಂಡ ಸ್ಪೋರ್ಟ್ಸ್ ಅಸೋಸಿಯೇಷನ್ ಮತ್ತು ಸಂಸ್ಥೆಯಾದ ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆಯ ಸಂಭ್ರಮಾಚರಣೆಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ನಗರ ಪ್ರದೇಶ ಯಾವುದೆ ಕಾರ್ಯಕ್ರಮ ಮಾಡಿದರೂ ಜನರನ್ನು ಲಾರಿಗಳಲ್ಲಿ ತರಬೇಕು. ಆದರೆ ಹಳ್ಳಿಗಳಲ್ಲಿ ಇಂದಿಗೂ ಸ್ವಯಂಪ್ರೇರಣೆಯಿಂದ ಭಾಗವಹಿಸುತ್ತಾರೆ ಎಂದರು.
ಉದ್ಘಾಟನೆ: 133 ವಸಂತ ಕಂಡ ಸರ್ಕಾರಿ ಶಾಲೆಯ ಸಂಭ್ರಮಾಚರಣೆಯನ್ನು ಸ್ಪೀಕರ್ ಕಾಗೋಡು ಉದ್ಘಾಟಿಸಿದರು. ಬಳಿಕ ಸಂಭ್ರಮದ ನೆನಪಿಗಾಗಿ 133 ಬಲೂನ್‌ಗಳನ್ನು ನೆಹರೂ ಮೈದಾನದಲ್ಲಿ ಹಾರಿಸಲಾಯಿತು. ಬಳಿಕ ಮಾತನಾಡಿ ಸರ್ಕಾರಿ ಶಾಲೆಯೊಂದು ಶತಮಾನೋತ್ಸವ ಆಚರಸಿರುತ್ತಿರುವುದು ಹೆಮ್ಮೆಯ ವಿಷಯ. ಜನರ ಶಿಕ್ಷಣದ ಹಸಿವು ತೀರಿಸಿದ ಶಾಲೆಯನ್ನು ಗೌರವಿಸುವುದು ಅರ್ಥಪೂರ್ಣವಾಗಿದೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಜೀರ್ ಅಧ್ಯಕ್ಷತೆ ವಹಿಸಿದ್ದರು. ಡಾ.ಮಾರ್ಷಲ್ ಶರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಲನಚಿತ್ರ ನಟ ಅಭಿಜಿತ್, ಶಿವಮೊಗ್ಗದ ವಕೀಲ ಹಳೇ ವಿದ್ಯಾರ್ಥಿ ನಂಜುಂಡಪ್ಪ ಗೊರಗೋಡು, ಜಿಪಂ ಸದಸ್ಯರಾದ ಕಲಗೋಡು ರತ್ನಾಕರ್, ಜ್ಯೋತಿ ಚಂದ್ರಮೌಳಿ, ಶುಭಾ ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ ನಾಗರತ್ನ ದೇವರಾಜ್, ಎಪಿಎಂಸಿ ಅಧ್ಯಕ್ಷ ಜಿ.ಎಸ್.ಅನಂತರಾವ್, ದುಬೈ ಕನ್ನಡ ಸಂಘದ ಅಧ್ಯಕ್ಷ ಡಾ.ಬಿ.ಕೆ.ಯಾಸೂಪ್, ಶಿಕ್ಷಣ ಇಲಾಖೆ ಉಪನಿರ್ದೇಶಕ ಬಸವರಾಜಪ್ಪ, ಬಿಇಒ ವೀರಭದ್ರಪ್ಪ, ಗಾಯಕ ಗರ್ತಿಕೆರೆ ರಾಘಣ್ಣ, ಹಳೇ ವಿದ್ಯಾರ್ಥಿಗಳು, ಸ್ಪೋರ್ಟ್ಸ್ ಕ್ಲಬ್ ಸದಸ್ಯರು, ಪಟ್ಟಣ ಪಂಚಾಯ್ತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement