ನಗರದದಲ್ಲಿ ಪ್ರಥಮ ಬಾರಿಗೆ 'ರಂಗಹಬ್ಬ'
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ. 17
ರಂಗತಂಡಗಳ ಪರಸ್ಪರ ಸಹಕಾರ ತತ್ವದ ಆಧಾರದ ಮೇಲೆ ಶಿವಮೊಗ್ಗದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗ ರಂಗಹಬ್ಬ ಆಯೋಜನೆಯಾಗಿದೆ. ನಗರದ ಎಲ್ಲ ರಂಗ ತಂಡಗಳು ಒಗ್ಗೂಡಿ ಈ ಉತ್ಸವವನ್ನು ಆಯೋಜಿಸಿವೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶಿವಮೊಗ್ಗದ ಹಬ್ಬದ ಸಂಚಾಲಕ ವೈದ್ಯ, ಇದೇ ಮಾ.17 ರಿಂದ 28 ರವರೆಗೆ ಈ ಉತ್ಸವ ನಡೆಯಲಿದೆ. ಪ್ರತಿದಿನ ಸಂಜೆ ನಾಟಕ ನಡೆಯುವುದರ ಜತೆಗೆ ನಾಟಕಗಳ ಛಾಯಾಚಿತ್ರ ಪ್ರದರ್ಶನ, ಉಪನ್ಯಾಸ, ಹಿರಿಯ ಕಲಾವಿದರಿಗೆ ಸನ್ಮಾನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಾಹಿತಿ- ಮಾರ್ಗದರ್ಶನ: ಮಾ.17 ಮತ್ತು 28ರಂದು ನಡೆಯುವ ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭಕ್ಕೆ ನಾಡಿನ ರಂಗಭೂಮಿಯ ಹಿರಿಯ ಹಾಗೂ ಹೆಸರಾಂತ ಕಲಾವಿದರು ಆಗಮಿಸಲಿದ್ದಾರೆ. ಮಾ.27ರಂದು ವಿಶ್ವ ರಂಗಭೂಮಿ ದಿನದ ವಿಶೇಷವಾಗಿ ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡು ರಂಗಭೂಮಿ ಕುರಿತಾಗಿ ಮಾಹಿತಿ ಮಾರ್ಗದರ್ಶನ ನೀಡಲಿದ್ದಾರೆ ಎಂದರು.
ಶಿವಮೊಗ್ಗ ರಂಗ ಹಬ್ಬದ ಸಂದರ್ಭ ಕುವೆಂಪು ರಂಗಮಂದಿರದ ಮೆಟ್ಟಿಲುಗಳ ಮೇಲೆ ನಿತ್ಯ ಸಂಜೆ 5.30 ರಿಂದ ವಿವಿಧ ರಂಗ ತಂಡಗಳು, ಆಹ್ವಾನಿತ ಕಲಾವಿದರಿಂದ ರಂಗಗೀತೆಗಳ ಗಾಯನ, ಜಾನಪದ-ಭಾವಗೀತೆಗಳ ಗಾಯನ ನಡೆಯಲಿದೆ ಎಂದರು.
ಮನವಿ: ನಗರದಲ್ಲಿ 23 ರಂಗತಂಡಗಳು ಕ್ರಿಯಾಶೀಲವಾಗಿದೆ. ರಂಗಮಂದಿರ ಲಭ್ಯತೆಯ ಆಧಾರದ ಮೇಲೆ 12 ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಆದರೆ, ಎಲ್ಲಾ ತಂಡಗಳೂ ಸಂಘಟನೆಯಲ್ಲಿ ಕೈಜೋಡಿಸಿವೆ. ಎಲ್ಲರೂ ಜವಾಬ್ದಾರಿಗಳನ್ನು ಹಂಚಿಕೊಂಡು ಕೆಲಸ ಮಾಡುತ್ತಾರೆ. ಕೇವಲ ರಂಗಾಸಕ್ತರು, ದಾನಿಗಳ ನೆರವಿನಿಂದ ಈ ರಂಗ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ರಂಗಾಸಕ್ತರು ಕೈಜೋಡಿಸಬೇಕೆಂದು ಅವರು ಮನವಿ ಮಾಡಿದರು.
ಒಕ್ಕೂಟ ಹೀಗಿದೆ: ಈವರೆಗೆ ಕಲಾವಿದರು ಒಕ್ಕೂಟವು ಸುವರ್ಣ ಕರ್ನಾಟಕ ವರ್ಷಾಚರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಇತಿಹಾಸ ಅನಾವರಣಗೊಳಿಸುವ ಆರ್.ಎಸ್. ಹಾಲಸ್ವಾಮಿ ರಚನೆಯ, ಕಾಂತೇಶ್ ಕದರ ಮಂಡಲಗಿ ನಿರ್ದೇಶದ “¬}ÚßÀ×ÚÙ eæàÀÞ~’, ವಿಜಯಲಕ್ಷ್ಮಿಯವರ ರಚನೆಯ “VÚMVÛ ÄÔÚÂ’ ನಾಟಕವನ್ನು ಅವರದೇ ನಿರ್ದೇಶನದಲ್ಲಿ ಪ್ರದರ್ಶಿಲಾಗಿದೆ. 5 ನಾಟಕಗಳ ವಸಂತರಂಗ ಉತ್ಸವವನ್ನೂ ಸಹ ಆಯೋಜಿಸಿತ್ತು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರು ಒಕ್ಕೂಟದ ಗೌರವಾಧ್ಯಕ್ಷ ಡಾ. ಕೆ.ಎ. ಅಶೋಕ್ ಪೈ, ಕಾರ್ಯಾಧ್ಯಕ್ಷ ಪ್ರೊ. ಎಸ್.ಸಿ. ಗೌರಿ ಶಂಕರ್, ಉಪಾಧ್ಯಕ್ಷ ಕಾಂತೇಶ್ ಕದರಮಂಡಲಗಿ, ಕಾರ್ಯದರ್ಶಿ ಆರ್.ಎಸ್. ಹಾಲಸ್ವಾಮಿ, ಹಬ್ಬದ ನಾಟಕಗಳ ನಿರ್ದೇಶಕರು ಇದ್ದರು.
ಹಬ್ಬದ ನಾಟಕಗಳು
ಸಹ್ಯಾದ್ರಿ ರಂಗತರಂಗ- ಗಿಳಿಯು ಪಂಜರದೊಳಿಲ್ಲ (ನಿ: ಅಜೇಯ ಸಿಂಹ)
ಮಲೆನಾಡು ಕಲಾತಂಡ- ಕಳ್ರು (ನಿ: ಗಣೇಶ್ ಕೆಂಚನಾಲ)
ಬೆಳಕು- ದಾಳ (ನಿ: ಟಿ.ಮನು)
ರಂಗ ಬೆಳಕು- ಡಾಂಬರು ಬಂದುದು (ನಿ: ಟಿ.ಭಾಸ್ಕರ್)
ಮದಕರಿ ಕಲಾ ವೇದಿಕೆ- ರಾವಣ (ನಿ: ಡಾ. ಸಾಸ್ವೆಹಳ್ಳಿ ಸತೀಶ್)
ನವಮ್ಟೀಮ್- ಓ... ಲಕ್ಷ್ಮಣ (ನಿ: ಎಸ್.ಆರ್. ವಿಜಯಲಕ್ಷ್ಮಿ)
ಸಹ್ಯಾದ್ರಿ ಕಲಾತಂಡ- ಮಂಟೆಸ್ವಾಮಿ ಕಥಾ ಪ್ರಸಂಗ (ನಿ: ಲವ ಜಿ.ಆರ್)
ನಮ್ ಹಳ್ಳಿ ಥಿಯೇಟರ್- ಅಶ್ವಪರ್ವ (ನಿ: ಚೇತನ್ ರಾಯನಹಳ್ಳಿ)
ಕತ- ಮಹಿಮಾಪುರ (ನಿ: ನಾಗರಾಜ್)
ಹೊಂಗಿರಣ- ಯಹೂದಿ ಹುಡುಗಿ (ನಿ: ಚಂದ್ರಶೇಖರ್ ಹಿರೇಗೋಣಿಗೆರೆ)
ಅಭಿನಯ- ಪ್ರತಿಜ್ಞಾ ಯೌಗಂಧನಾರಾಯಣ (ನಿ: ಹಾಲೇಶಪ್ಪ)
ಸಮೀರ ಸಮೂಹ- ಸುಮಧ್ವ ವಿಜಯ (ನಿ: ಸುಧೀಂದ್ರ ರಾವ್)