ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮಕ್ಕಳ ಕನಸುಗಳಿಗೆ ರೂಪು ನೀಡಿ'

Lingaraj Badiger
Updated On : 18 Feb 2014, 11:56 am

ಜೋಗ್‌ಫಾಲ್ಸ್: ದೇಶದ ಭವಿಷ್ಯಕ್ಕಾಗಿ ಮಕ್ಕಳ ಕನಸುಗಳಿಗೆ ರೂಪು ಕೊಡಬೇಕು ಎಂದು ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ತಿಳಿಸಿದರು.
 ಅವರು ತಾಳಗುಪ್ಪ ವಲಯ ಮಟ್ಟದ ಬಾಲಮೇಳ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸಬೇಕಾದುದು ಪೋಷಕರ ಹೊಣೆ. ನಾಡಿನ ಮಕ್ಕಳು ಉತ್ತಮ ಪ್ರಜೆಗಳಾಗಿ ದೇಶ ಕಟ್ಟುವ ಕಾರ್ಯಕರ್ತರಾಗಬೇಕೆಂಬ ಹಂಬಲದಿಂದ ಸರಕಾರ ಬಾಲ್ಯಾವಸ್ಥೆಯಿಂದಲೇ ಕಾರ್ಯಕ್ರಮ ರೂಪಿಸಿದೆ ಎಂದರು.
 ಪೋಷಕರು ಶಾಲೆಗೆ ಮಕ್ಕಳನ್ನು ಕಳಿಸಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಭಾವಿಸದೆ ಅವರ ದಿನ ನಿತ್ಯದ ಚಟುವಟಿಕೆಯನ್ನು ಪರಾಮರ್ಶಿಸಿ, ಒಳಿತು ಕೆಡುಕುಗಳನ್ನು ಗ್ರಹಿಸುವ ಹೆಚ್ಚಿಸಬೇಕು ಎಂದರು.  ಜಿಲ್ಲಾ ಪಂಚಾಯ್ತಿ ಸದಸ್ಯೆ ಲಲಿತಾ ನಾರಾಯಣ್, ಜೋಯಪ್ಪ, ವನಮಾಲ, ಲಲಿತಾ, ನಾಗರಾಜ್.ಎನ್, ತಾಲೂಕು  ಪಂಚಾಯ್ತಿ ಸದಸ್ಯೆ ಸುಮಿತ್ರಾ, ಮೂಗಿಮನೆ ಸುಬ್ಬರಾಯರು ಉಪಸ್ಥಿತರಿದ್ದರು.
 ತಾಳಗುಪ್ಪ ವಲಯದ 24 ಅಂಗನವಾಡಿ ಕೇಂದ್ರಗಳ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement