ಯುವ ಕಾಂಗ್ರೆಸ್ ಸದಸ್ಯತ್ವ ಕಾರ್ಡ್ ವಿತರಣೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.17
ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಸದಸ್ಯತ್ವ ಪಡೆದ ಯುವ ಕಾರ್ಯಕರ್ತರಿಗೆ ಸೋಮವಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಗುರುತಿನ ಚೀಟಿ ನೀಡುವ ಮೂಲಕ ಕಾರ್ಡ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಈ ದೇಶದ ಶಕ್ತಿಯೇ ಯುವಕರು-ಯುವತಿಯರು. ಸ್ವಚ್ಛ ಸಮಾಜ ನಿರ್ಮಾಣಕ್ಕಾಗಿ ದೇಶದ ಪ್ರಗತಿಗೆ ಯುವಕರ ಪಾತ್ರ ಮುಖ್ಯ. ಇಂದು ಗುರುತಿನ ಚೀಟಿ ಪಡೆದ ಯುವಕರು ಪಕ್ಷದ ಸಂಘಟನೆಗೆ, ನ್ಯಾಯಪರ ಹೋರಾಟ ನಡೆಸಬೇಕು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಿಳಿಸಬೇಕೆಂದರು. ಈ ಸಂದರ್ಭದಲ್ಲಿ ಲೋಕಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರವೀಣ್ ಕುಮಾರ್, ಶಿವಮೊಗ್ಗ ವಿಧಾನಸಭಾ ಯುವ ಕಾಂಗ್ರೆಸ್ ಅಧ್ಯಕ್ಷ ಟಿ.ವಿ.ರಂಜಿತ್ ಇದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಹಾಲಪ್ಪ, ಯುವ ಮುಖಂಡ ಕೆ.ರಂಗನಾಥ್, ಪದಾಧಿಕಾರಿಗಳಾದ ಮೊಹಮ್ಮದ್ ಆರೀಫ್, ಎಚ್.ಪಿ.ಗಿರೀಶ್, ಆರ್.ಕಿರಣ್, ಲೋಕೇಶ್, ಶಿವಮೂರ್ತಿ, ಶರತ್, ಪೈರೋಜ್, ಶಿವರಾಜ್ ಇತರರು ಇದ್ದರು.