'ಸಾಂಸ್ಕೃತಿಕ ಅರಿವಿನಿಂದ ಮಾನಸಿಕ ನೆಮ್ಮದಿ'
ಸಾಗರ: ಅನ್ನದಿಂದ ಹೊಟ್ಟೆ ತುಂಬಿಸಿಕೊಂಡಾಗ ಅಲ್ಪತೃಪ್ತಿ ಸಿಗುತ್ತದೆ. ಆದರೆ ಸಾಂಸ್ಕೃತಿಕವಾಗಿ ಹೊಟ್ಟೆ ತುಂಬಿಸಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಕನ್ನಡ ಅಧ್ಯಾಪಕ ಎಸ್.ಎನ್. ಪಾಲಾಕ್ಷಪ್ಪ ಹೇಳಿದರು.
ಇಲ್ಲಿನ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪ್ರಜ್ಞಾ ಭಾರತಿ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡಿದ್ದ ಟಿ. ಮಹಾಬಲೇಶ್ವರ ಭಟ್ಟ ಅವರು ನೀಡಿದ ಡಾ. ಎಂ. ಗೋಪಾಲಕೃಷ್ಣ ಅಡಿಗರ ದತ್ತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಕವಿ ಡಾ. ಗೋಪಾಲಕೃಷ್ಣ ಅಡಿಗರ ಕಾವ್ಯ ಅವರು ಬದುಕಿನಲ್ಲಿ ಅನುಭವಿಸಿದ ಘಟನೆಗಳನ್ನು ಆಧರಿಸಿರುತಿತ್ತು. ಸಾಗರದ ಎಲ್.ಬಿ. ಕಾಲೇಜಿನ ಸಂಸ್ಥಾಪಕ ಪ್ರಾಚಾರ್ಯರಾಗಿ, ಈ ನೆಲದಲ್ಲೂ ಕೆಲವು ಕಾಲ ಓಡಾಡಿಕೊಂಡಿದ್ದರು ಎನ್ನುವುದು ನಾವೆಲ್ಲರೂ ಹೆಮ್ಮೆಪಟ್ಟುಕೊಳ್ಳುವ ಸಂಗತಿ ಎಂದರು.
ವಿಶ್ವನಾಥ ಭಟ್, ಆದಿತ್ಯ, ಪ್ರಜ್ಞಾ ಭಾರತಿ ವಿದ್ಯಾಸಂಸ್ಥೆ ಸಂಸ್ಥಾಪಕ ಸದಾನಂದ ಶರ್ಮ, ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಅನಿಶ್ ಎಸ್. ಶರ್ಮ ಇದ್ದರು.
ಕಾರ್ಯಕ್ರಮದಲ್ಲಿ ಎಸ್.ಬಿ. ರಘುನಾಥ್ ಸ್ವಾಗತಿಸಿದರು. ದೀಪಕ್ ಸಾಗರ್ ನಿರೂಪಿಸಿದರು. ಜಿ. ನಾಗೇಶ್ ವಂದಿಸಿದರು.